– ಇನ್ಮುಂದೆ ದೊಡ್ಡ ಪ್ರಮಾಣದಲ್ಲಿ ಸಿಡಿ ಹೊರಬರುತ್ತದೆಚಿಕ್ಕೋಡಿ: ಮುನಿರತ್ನ (Muniratna) ಬೈದಿದ್ದು ಇನ್ನೂ ಸಾಬೀತಾಗಿಲ್ಲ. ಇದು ಸಿಡಿ ಶಿವು ಕೆಲಸ. ಅವನ ವಿರೋಧಿಗಳನ್ನು ಎಲ್ಲರನ್ನೂ ಜೈಲಿಗೆ ಹಾಕುತ್ತಾನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ರಮೇಶ್ ಜಾರಕಿಹೊಳಿ (Ramesh Jarkiholi) ಆರೋಪಿಸಿದ್ದಾರೆ.ಬಿಜೆಪಿ ಶಾಸಕ ಮುನಿರತ್ನ ಅರೆಸ್ಟ್ ವಿಚಾರಕ್ಕೆ ಅಥಣಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಡಿಕೆಶಿ ಕಂಪನಿ ರಾಜ್ಯದಲ್ಲಿ ನನ್ನನ್ನು ಮೊದಲು ಬಲಿ ಪಡೆದರು. ನಂತರ ದೇವೇಗೌಡ ಕುಟುಂಬವನ್ನು ಬಲಿ ಪಡೆದರು. ಇದೀಗ ಮುನಿರತ್ನ ಅವರನ್ನು ಬಲಿ ಪಡೆದುಕೊಂಡಿದ್ದಾರೆ. ಮುಂದೆ ಯಾರ ಬಲಿ ಪಡೆಯುತ್ತಾರೆ ನೋಡಿ. ಇದನ್ನೆಲ್ಲಾ ನೋಡಿದರೆ ಒಂದು ಫಿಲ್ಮ್ ನೋಡಿದ ರೀತಿ ಆಗುತ್ತದೆ. ಸಿಡಿ ಶಿವುನಿಂದ ಕಾಂಗ್ರೆಸ್ ನಾಯಕರು ತೊಂದರೆ ಅನುಭವಿಸುತ್ತಾರೆ ಎಂದರು. ಇದನ್ನೂ ಓದಿ: ವಂದೇ ಮೆಟ್ರೋ ಈಗ ‘ನಮೋ ಭಾರತ್ ರೈಲು’ – ಚಾಲನೆ ನೀಡಿದ ಮೋದಿಇನ್ನುಮುಂದೆ ಅನೇಕ ಸಿಡಿಗಳು ದೊಡ್ಡ ಪ್ರಮಾಣದಲ್ಲಿ ಬರುತ್ತದೆ. ಸಿಡಿ ಬಗ್ಗೆ ಸಿಬಿಐ ತನಿಖೆಗೆ ನೀಡಬೇಕು. ರಾಜ್ಯದಲ್ಲಿ ನಡೆಯುತ್ತಿರುವ ನಕಲಿ ಸಿಡಿ ತಡೆಗೆ ಪ್ರಧಾನಿ ಸಿಬಿಐ ತನಿಖೆಗೆ ವಹಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: 2030 ರ ವೇಳೆಗೆ 500 GW ಗ್ರೀನ್ ಎನರ್ಜಿ ಉತ್ಪಾದನೆ ಗುರಿ: ಮೋದಿಮುನಿರತ್ನ ಬೈದಿರುವುದು ಸಾಬೀತಾಗಿಲ್ಲ. ಅವಾಗಲೇ ನಮ್ಮ ಬಿಜೆಪಿ ನಾಯಕರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಫ್‌ಎಸ್‌ಎಲ್ ವರದಿ ಬರುವವರೆಗೆ ನಮ್ಮವರು ಮಾತನಾಡಬಾರದು. ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಆರ್ ಅಶೋಕ್ ಕೂಡ ಮುನಿರತ್ನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುನಿರತ್ನ ಬೈದಿರುವುದು ದೃಢವಾಗಿಲ್ಲ. ಮುನಿರತ್ನ ಬೈದಿರುವ ಆಡಿಯೋ ಕಟ್ ಆಂಡ್ ಪೇಸ್ಟ್ ಇರಬಹುದು. ನಮ್ಮ ಬಿಜೆಪಿ ನಾಯಕರೇ ಬಯ್ಯೋದು ಎಷ್ಟರ ಮಟ್ಟಿಗೆ ಸರಿ. ಮುನಿರತ್ನ ವಿಚಾರದಲ್ಲಿ ಬಿಜೆಪಿ ನಾಯಕರು ದುಡುಕಿ ನಿರ್ಧಾರ ಮಾಡುತ್ತಿದ್ದಾರೆ. ಅವರ ವಿರುದ್ಧ ಬಿಜೆಪಿ ವರಿಷ್ಠರು ನೋಟಿಸ್ ಜಾರಿ ಮಾಡಬೇಕು. ಡಿಕೆ ಶಿವಕುಮಾರ್‌ಗೆ ಈ ಕೆಲಸ ಬಿಟ್ಟರೆ ಬೇರೆ ಕೆಲಸವಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ನವೀಕರಿಸಬಹುದಾದ ಇಂಧನ ವಲಯದಲ್ಲಿ ಕರ್ನಾಟಕಕ್ಕೆ ನಾಲ್ಕು ಪ್ರಶಸ್ತಿಡಿಕೆ ಶಿವಕುಮಾರ್ ಯಾವುದೇ ಹೋರಾಟದಿಂದ ಬೆಳೆದಿಲ್ಲ. ಗ್ರಾಮ ಪಂಚಾಯತ್ ಮೆಂಬರ್ ಆಗೋಕೂ ಕೂಡ ಅವನು ಲಾಯಕ್ಕಿಲ್ಲ. ಅಡ್ಜಸ್ಟ್ಮೆಂಟ್ ರಾಜಕಾರಣಿ ಆಗಿದ್ದರಿಂದ ಏಳೆಂಟು ಸಲ ಎಂಎಲ್‌ಎ ಆಗಿದ್ದಾನೆ. ಮುಂದಿನ ಸಲವೂ ಕೂಡ ಡಿಕೆ ಶಿವಕುಮಾರ್ ಸೋಲುತ್ತಾನೆ. ಲೋಕಸಭಾ ಚುನಾವಣೆಯಲ್ಲಿ ಡಿಕೆ ಸುರೇಶ್ ಎರಡೂವರೆ ಲಕ್ಷ ಮತಗಳಿಂದ ಸೋತ. ಡಿಕೆ ಶಿವಕುಮಾರ್ ಅರ್ಜೆಂಟ್ ಮಾಡಿಕೊಂಡು ಕಾಲಿಗೆ ಬಿದ್ದು ಎಂಎಲ್‌ಎ ಆಗಿದ್ದಾನೆ ಎಂದು ಕಿಡಿಕಾರಿದರು. ಇದನ್ನೂ ಓದಿ: Fifth And Final Call | ಮಾತುಕತೆಗಾಗಿ ಪ್ರತಿಭಟನಾನಿರತ ವೈದ್ಯರಿಗೆ ಅಂತಿಮ ಆಹ್ವಾನ ಕೊಟ್ಟ ದೀದಿನನ್ನ, ದೇವೇಗೌಡ ಕುಟುಂಬ ಮತ್ತು ಮುನಿರತ್ನ ಕುಟುಂಬಕ್ಕೆ ಕೆಟ್ಟ ಪರಿಸ್ಥಿತಿ ಬಂದಿದೆ. ಮುಂದೆ ಹಲವು ಕಾಂಗ್ರೆಸ್ ನಾಯಕರಿಗೆ ಈ ಪರಿಸ್ಥಿತಿ ಬರಲಿದೆ. ಮುನಿರತ್ನ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಕೈವಾಡ ಇದೆ. ಮುನಿರತ್ನ ಪ್ರಕರಣವನ್ನು ಸಿಬಿಐಗೆ ಕೊಡಬೇಕು. ಆಗ ಸತ್ಯಾಸತ್ಯತೆ ಹೊರಗೆ ಬರುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬ್ರೇಕ್ ಫೇಲ್ ಆಗಿ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ – ಓರ್ವ ಸಾವು, ಮತ್ತೊಬ್ಬ ಗಂಭೀರ






 Advertisement 




Sign in to your account
Username or Email Address


Password

 Remember Me


