-ಸಚಿವ ಸಂಪುಟ ಸಭೆಗೆ ಬಿಜೆಪಿ ವ್ಯಂಗ್ಯಬೆಂಗಳೂರು: ದಶಕದ ಬಳಿಕ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಾದ ಕಲಬುರಗಿಯಲ್ಲಿ (Kalaburagi) ನಾಳೆ (ಮಂಗಳವಾರ) ಸಚಿವ ಸಂಪುಟ ಸಭೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಇಂದೇ ಕಲಬುರಗಿ ತಲುಪಿದ್ದಾರೆ.ನಾಳೆ ಬೆಳಗ್ಗೆ 8.25ಕ್ಕೆ ಸರ್ಧಾರ್ ವಲ್ಲಭಭಾಯಿ ಪಟೇಲ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಿರುವ ಸಿಎಂ ಸಿದ್ದರಾಮಯ್ಯ, 9 ಗಂಟೆಗೆ ಡಿಎಆರ್ ಪೊಲೀಸ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನದ ಅಂಗವಾಗಿ ಧ್ವಜಾರೋಹಣ ಮಾಡಲಿದ್ದಾರೆ. ಸಂಜೆ 4 ಗಂಟೆಗೆ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಸಂಪುಟ ಸಭೆಯ ಸಿದ್ಧತೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್ ಪರಿಶೀಲನೆ ನಡೆಸಿದರು. ನಾಳಿನ ಸಚಿವ ಸಂಪುಟ ಸಭೆಗೆ ಬಿಜೆಪಿ ವ್ಯಂಗ್ಯವಾಡಿದೆ. ಇದನ್ನೂ ಓದಿ: ಕೋಮುಗಲಭೆ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿ: ಅಶೋಕ್ ಆಗ್ರಹಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಮಾತಾಡಿ, ಕಾಂಗ್ರೆಸ್ (Congress) ಪಕ್ಷ ಅಂದರೆ ನಾಟಕ ಕಂಪನಿಯಿದ್ದಂತೆ. ಹೀಗಾಗಿ ನಾಳೆ 2 ಗಂಟೆಗಳ ಕ್ಯಾಬಿನೆಟ್ ಡ್ರಾಮಾ ನಡೆಯಲಿದೆ. ಬರೀ ಸಚಿವರು ಓಡಾಡುವ ರಸ್ತೆ ಮಾತ್ರ ಧೂಳು ತೆಗೆದು ಗುಂಡಿ ಮುಚ್ಚುತ್ತಿದ್ದಾರೆ. ಕಲಬುರಗಿಗೆ ಪ್ರವಾಸಿಗರ ರೀತಿ ಸಚಿವರು ಬರಬಾರದು. ಜನರ ಸಮಸ್ಯೆ ಕೇಳಲು ಬರಬೇಕು ಎಂದಿದ್ದಾರೆ. ಇದನ್ನೂ ಓದಿ: ಈದ್ ಮಿಲಾದ್ ಹೊತ್ತಲ್ಲೇ ರಾಜ್ಯದಲ್ಲಿ ಪ್ಯಾಲೆಸ್ತೀನ್ ಪ್ರೇಮ – ಚಿಕ್ಕಮಗಳೂರಲ್ಲಿ ಬಾವುಟ; 6 ಮಂದಿ ವಿರುದ್ಧ ಕೇಸ್Sign in to your account
Username or Email Address


Password

 Remember Me


