ವಿಜಯಪುರ: ರಸ್ತೆ ಅಪಘಾತದಲ್ಲಿ ಮೃತಪಟ್ಟ ತನ್ನ ಮರಿಗಾಗಿ ತಾಯಿ ಶ್ವಾನವೊಂದು ಮೂಕರೋಧನೆ ಪಟ್ಟ ಮನಕಲಕುವ ದೃಶ್ಯ ತಾಯಿ ಪ್ರೀತಿ ಏನು ಎನ್ನುವುದನ್ನ ಸಾರುತ್ತಿದೆ.ಹೌದು. ತಾಯಿಗೆ ಮಕ್ಕಳೇ ಜೀವ. ಮಕ್ಕಳ ಮೇಲೆ ತಾಯಿ ತೋರುವ ಪ್ರೀತಿಗೆ ಸಾಟಿಯಿಲ್ಲ ಎನ್ನುತ್ತಾರೆ. ಹೀಗೆ ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ನಾಯಿ ಮರಿಯೊಂದು ರಸ್ತೆ ಮಧ್ಯೆ ಮೃತಪಟ್ಟಿತ್ತು. ಇದನ್ನು ಕಂಡ ತಾಯಿ ನಾಯಿ ಮರಿ ಬಿಟ್ಟು ಅತ್ತ ಇತ್ತ ಕದಲದೇ ರಸ್ತೆ ಮಧ್ಯೆಯೇ ಕೂತು ಮೂಕರೋಧನೆ ಪಡುತ್ತಿದೆ.ಮೃತ ಪಟ್ಟ ನಾಯಿಮರಿ ಬಳಿ ಒಂದು ಗಂಟೆಗೂ ಅಧಿಕ ಕಾಲದಿಂದ ತಾಯಿ ಶ್ವಾನ ಕೂತು ಕಣ್ಣೀರಿಡುತ್ತಿದೆ. ತನ್ನ ಮರಿ ಮೇಲಿಟ್ಟಿರುವ ಪ್ರೀತಿ ಕಂಡು ಸ್ಥಳೀಯರು ಕೂಡ ಮರುಗಿದ್ದಾರೆ.Sign in to your account
Username or Email Address


Password

 Remember Me


