ದಾವಣಗೆರೆ: ಅತ್ತೆಯ ಮನೆಯನ್ನು ಧ್ವಂಸ ಮಾಡಿ ಬಳಿಕ ಅಳಿಯನೇ ಬೆಂಕಿ ಹಚ್ಚಿದ ಘಟನೆಯೊಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಮಾರುತಿ ಸರ್ಕಲ್ ಬಳಿ ನಡೆದಿದೆ.ಇಸ್ಮಾಯಿಲ್ ಅತ್ತೆ ಮನೆ ಧ್ವಂಸ ಮಾಡಿದ ಅಳಿಯ. ಇಸ್ಮಾಯಿಲ್ ಕಿರುಕುಳಕ್ಕೆ ಬೇಸತ್ತು ಪತ್ನಿ ಮುಬೀಯಾ ತವರಿಗೆ ಬಂದಿದ್ದರು. ಇದರಿಂದ ರೊಚ್ಚಿಗೆದ್ದ ಇಸ್ಮಾಯಿಲ್ ತಡರಾತ್ರಿ ಮನೆಯನ್ನು ದ್ವಂಸ ಮಾಡಿದ್ದಾರೆ. ಬಳಿಕ ಬೆಂಕಿ ಹಚ್ಚಿದ್ದಾನೆ. ಅಲ್ಲದೆ ಮನೆಯಲ್ಲಿದ್ದ 60 ಸಾವಿರ ರೂಪಾಯಿ ನಗದು ಹಾಗೂ 30 ಗ್ರಾಂ ಚಿನ್ನ ತೆಗೆದುಕೊಂಡು ಪರಾರಿಯಾಗಿದ್ದಾನೆ.ಇಸ್ಮಾಯಿಲ್ ಬೆದರಿಕೆಗೆ ಹೆದರಿ ಇಸ್ಮಾಯಿಲ್ ಪತ್ನಿ ಮುಬೀನಾ ಹಾಗೂ ಅತ್ತೆ ರಜಿಯಾಬಿ ಕಳೆದ ಆರು ತಿಂಗಳಿಂದ ಸಂಬಂಧಿಕರ ಮನೆಯಲ್ಲಿ ಮಲಗುತ್ತಿದ್ದರು. ಸದ್ಯ ಪ್ರಕರಣ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಇಸ್ಮಾಯಿಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ.Sign in to your account
Username or Email Address


Password

 Remember Me


