ಚಿಕ್ಕಮಗಳೂರು: ನಡೆದಾಡುವ ದೇವರೆಂದೇ ಹೆಸರುವಾಸಿಯಾಗಿರುವ ವಿನಯ್ ಗುರೂಜಿಗಾಗಿ ಗುಹೆ ನಿರ್ಮಾಣವಾಗುತ್ತಿದೆ.ಹೌದು. ಕೊಪ್ಪ ತಾಲೂಕಿನ ಗೌರಿಗದ್ದೆ ದತ್ತಾಶ್ರಮದಲ್ಲಿ ಗುಹೆ ಸಿದ್ಧವಾಗುತ್ತಿದ್ದು, ಶೀಘ್ರದಲ್ಲೇ ವಿನಯ್ ಗುರೂಜಿ ಗುಹೆಯಲ್ಲಿ ಧ್ಯಾನ ಮಾಡಲಿದ್ದಾರೆ. ಏಕಾಗ್ರತೆಗಾಗಿ ಭಕ್ತರಿಂದ ದೂರ ಉಳಿಯುವ ನಿಟ್ಟಿನಲ್ಲಿ ಗುರೂಜಿ ಈ ಗುಹೆ ಸೇರಲಿದ್ದಾರೆ ಎನ್ನಲಾಗಿದೆ.ಪ್ರತಿ ಶುಕ್ರವಾರ ಮಾತ್ರ ಭಕ್ರಿಗೆ ದರ್ಶನ ಕೊಡ್ತಿರೋ ಗುರೂಜಿಯವರು ಕೆಲ ದಿನಗಳಲ್ಲೇ ಗುಹೆಯೊಳಗೆ ಧ್ಯಾನದಲ್ಲಿ ತಲ್ಲೀನರಾಗಲಿದ್ದಾರೆ. ಸಿಮೆಂಟ್ ನಿಂದ ನಿರ್ಮಾಣವಾಗ್ತಿರೋ ಈ ಕೃತಕ ಗುಹೆಯನ್ನು ಗುರೂಜಿಯವರೇ ತಮ್ಮ ಸಿಬ್ಬಂದಿಗೆ ಹೇಳಿ ಸಿದ್ಧಪಡಿಸಿದ್ದಾರೆ.ಗುರೂಜಿ ಈ ಹಿಂದೆ ಹಿರಿಯ ರಾಜಕಾರಣಿಗಳಿಂದ ಪಾದಪೂಜೆ ಮಾಡಿಸಿಕೊಂಡು ಸುದ್ದಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಗುರೂಜಿಯ ಏಕಾಗ್ರತೆಗೆ ಭಂಗವಾಗಿದೆಯಂತೆ. ಇದರಿಂದ ದೂರವಾಗಲು ಗುಹೆ ಪ್ರವೇಶ ಮಾಡಲು ನಿರ್ಧಾರ ಮಾಡಿದ್ದು, ಇದೇ ತಿಂಗಳಲ್ಲಿ ಗುಹೆ ಸಿದ್ಧವಾಗಿ ಪ್ರವೇಶ ಮಾಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.Sign in to your account
Username or Email Address


Password

 Remember Me


