ಬೆಂಗಳೂರು: ಮಂಡ್ಯದಲ್ಲಿ ಸೋತ ನಿಖಿಲ್ ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಯುವ ಘಟಕದ ಜವಾಬ್ದಾರಿ ನೀಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.ಇತ್ತೀಚೆಗೆ ಗೌಡರ ಸಮ್ಮುಖದಲ್ಲಿ ಜೆಡಿಎಸ್ ಶಾಸಕರ ಸಭೆ ನಡೆಯಿತು. ಈ ವೇಳೆ ಕೆಲ ಶಾಸಕರು ನಿಖಿಲ್ ಪರ ವಾದ ಮಾಡಿದರೆ, ಮತ್ತೆ ಕೆಲವರು ಪ್ರಜ್ವಲ್ ಪರ ವಾದ ಮಾಡಿದ್ದಾರೆ. ಆದರೆ ಅಂತಿಮ ನಿರ್ಧಾರವನ್ನು ವರಿಷ್ಠರೇ ಕೈಗೊಳ್ಳಬೇಕು ಎಂದು ನಿಖಿಲ್ ಹೇಳಿದ್ದಾರೆ.ಜೆಡಿಎಸ್ ಕಾರ್ಯಕರ್ತರನ್ನು ಪಕ್ಷ ಅವಲಂಬಿಸಿದೆ. ಆದರೆ ರಾಜಕೀಯವಾಗಿ ಸರಿಯಾಗಿ ತಂತ್ರ ಹೆಣೆಯುತ್ತಿಲ್ಲ. ಹಾಗಾಗಿ ಪಕ್ಷ ಬಲವರ್ಧನೆಗಾಗಿ ಹೊಸ ತಂತ್ರಗಾರರನ್ನು ಕರೆದುಕೊಂಂಡು ಬರಲಾಗುತ್ತದೆ. ವಿಜಯಪುರ, ಕಲಬುರಗಿ, ರಾಯಚೂರು, ಚಿತ್ರದುರ್ಗದಲ್ಲಿ ಪಕ್ಷಕ್ಕೆ ಬೆಳೆಯುವ ಅವಕಾಶವಿದೆ ಎಂದು ನಿಖಿಲ್ ಹೇಳಿದ್ದಾರೆ.Sign in to your account
Username or Email Address


Password

 Remember Me


