ಬೆಂಗಳೂರು: ಲೋಕಸಭಾ ಕ್ಷೇತ್ರ ತುಮಕೂರಿನಲ್ಲಿ ಸೋತಿದಕ್ಕೆ ಹೆಮ್ಮೆ ಇದೆ. ಆದರೆ ನಾನು ಮತ್ತೆ ಪಕ್ಷ ಕಟ್ಟುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.ಬೆಂಗಳೂರಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದವರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ದೇವೇಗೌಡರು, ನಿನ್ನೆ ರಾತ್ರಿಯಿಂದ ಆರೋಗ್ಯ ಸರಿಯಿಲ್ಲ. ನನ್ನ ಆರೋಗ್ಯ ನೋಡಿಕೊಳ್ಳುವುದಕ್ಕೆ ನಮ್ಮ ಮನೆಯಲ್ಲಿ 9 ಜನ ಡಾಕ್ಟರ್ಸ್ ಇದ್ದಾರೆ. ಆದರೆ ನಮ್ಮ ಪಕ್ಷದ ಆರೋಗ್ಯ ಸರಿ ಮಾಡುವುದು ನನ್ನ ಕೆಲಸವಾಗಿದೆ ಎಂದು ಹೇಳಿದ್ದಾರೆ.ತಾಲೂಕು ಮಟ್ಟದಲ್ಲಿ ಗೆದ್ದ ನಿಮ್ಮಿಂದಲೇ ನಾನು ಮತ್ತೆ ಪಕ್ಷ ಕಟ್ಟುತ್ತೇನೆ. ಪಕ್ಷದ ಸಂಘಟನೆ ಮಾಡುವುದಕ್ಕೆ ನಿಮ್ಮಿಂದಲೇ ಸಲಹೆ ಪಡೆದುಕೊಳ್ಳುತ್ತೇನೆ. ಚುನಾವಣೆಯಲ್ಲಿ ಸೋತಿದ್ದಕ್ಕೆ ಹೆಮ್ಮೆ ಇದೆ. ಎಲ್ಲಿ ಪೆಟ್ಟು ಬಿದ್ದಿದೆ ಎಂದು ಗೊತ್ತಾಯಿತು. ನಮ್ಮ ಸೋಲನ್ನ ಒಪ್ಪಿಕೊಳ್ಳೋಣ. ಆದರೆ ಸೋಲು ಒಪ್ಪಿಕೊಂಡು ಮನೆಯಲ್ಲಿ ಕೂರಲು ಆಗುವುದಿಲ್ಲ. ಪಕ್ಷ ಮತ್ತೆ ಕಟ್ಟುತ್ತೇನೆ. ಸರ್ಕಾರವನ್ನು ಕುಮಾರಸ್ವಾಮಿ ನಡೆಸಿಕೊಂಡು ಹೋಗುತ್ತಾರೆ ಎಂದು ದೇವೇಗೌಡರು ತಿಳಿಸಿದರು.Sign in to your account
Username or Email Address


Password

 Remember Me


