ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ನಟಿ ರಮ್ಯಾ ಇತ್ತೀಚೆಗೆ ತಮ್ಮ ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಂ ಖಾತೆಯ ಸಂದೇಶಗಳನ್ನು ಡಿಲೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹಾಸ್ಯನಟ ಬುಲೆಟ್ ಪ್ರಕಾಶ್ ರಮ್ಯಾ ಅವರನ್ನು ವ್ಯಂಗ್ಯ ಮಾಡಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಬುಲೆಟ್ ಪ್ರಕಾಶ್ “ಎಲೆಕ್ಷನ್‍ನಲ್ಲಿ ವೋಟ್ ಹಾಕದೆ ಜೂಟು, ಊರೆಲ್ಲ ಜನರ ಜೊತೆ ಫೈಟು, ಮಂಡ್ಯ ಟು ಬೆಂಗಳೂರು ಶಿಫ್ಟು, ಮೋದಿ ಹವಾಗೆ ಟ್ವಿಟ್ಟರ್ ಅಕೌಂಟ್ ಡಿಲಿಟ್ಟು, ಬೇಕಿತ್ತ ಮೇಡಮ್ ಇಷ್ಟೆಲ್ಲಾ ಗಿಲಿಟ್ಟು” ಎಂದು ಬರೆಯುವ ಮೂಲಕ ರಮ್ಯಾರನ್ನು ವ್ಯಂಗ್ಯವಾಡಿದ್ದಾರೆ.ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕವೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದ ರಮ್ಯಾ ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಂ ಖಾತೆಯ ಸಂದೇಶಗಳು ಮಾಯವಾಗಿದೆ. ಲೋಕಸಭಾ ಚುನಾವಣೆಯ ಸೋಲಿನ ನಿರಾಶೆಯಿಂದ ಸಾಮಾಜಿಕ ಜಾಲತಾಣದಿಂದ ದೂರ ಉಳಿದ್ರಾ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.ಈ ಹಿಂದೆ ರಮ್ಯಾ ಫೋಟೋ ಶಾಪ್ ಮಾಡಿದ್ದ ಫೋಟೋವನ್ನು ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಕಾಲೆಳೆಯಲು ಪ್ರಯತ್ನಿಸಿದ್ದರು. ಆಗ ಬುಲೆಟ್ ಪ್ರಕಾಶ್ ಅವರು ರಮ್ಯಾ ಅವರಿಗೆ ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದರು.ಎಲೆಕ್ಷನ್ನಲ್ಲಿ ವೋಟ್ ಹಾಕದೆ ಜೂಟು,ಊರೆಲ್ಲ ಜನರ ಜೊತೆ ಫೈಟು,ಮಂಡ್ಯ ಟು ಬೆಂಗಳೂರು ಶಿಫ್ಟು,ಮೋದಿ ಹವಾಗೆ ಟ್ವಿಟರ್ ಅಕೌಂಟ್ ಡಿಲಿಟ್ಟು,ಬೇಕಿತ್ತ ಮೆಡಮ್ ಇಷ್ಟೆಲ್ಲಾ ಗಿಲಿಟ್ಟು. pic.twitter.com/pvCqpxU9JL— Bullett Prakasha (@BulletPrakash2) June 4, 2019ಬುಲೆಟ್ ಪ್ರಕಾಶ್ ಅವರು ತಮ್ಮ ಟ್ವಿಟ್ಟರಿನಲ್ಲಿ, “ರಮ್ಯ ಮೇಡಮ್ (ಪದ್ಮಾವತಿ) ಈ ಮಗುವಿನ ವಯಸ್ಸಿನಲ್ಲಿ ನಿಮ್ಮ ತಂದೆಯವರು ನಿಮ್ಮ ಕಿವಿ ಹಿಂಡಿದ್ದರೆ ನೀವು ಹೀಗೆ ಆಗುತ್ತಿರಲಿಲ್ಲ. ನೀವು ಎರಡು ಚುನಾವಣೆಗಳಲ್ಲಿ ನಿಮ್ಮ ಹಕ್ಕು ಅಂದರೆ ಮತ ಚಲಾಯಿಸದವರು ನಿಮಗೆ ವಿಶ್ವನಾಯಕ ನರೇಂದ್ರ ಮೋದಿಯವರ ಬಗ್ಗೆ ಮಾತನಾಡುವುದಕ್ಕೆ ಯಾವುದೇ ನೈತಿಕತೆ ಇಲ್ಲ” ಎಂದು ಬರೆದು ಟ್ವೀಟ್ ಮಾಡಿದ್ದರು.Sign in to your account
Username or Email Address


Password

 Remember Me


