ಬೆಂಗಳೂರು: ಫೀಸ್ ಕಟ್ಟೋದು ಸ್ವಲ್ಪ ಲೇಟ್ ಆಗುತ್ತೆ ಎಂದ ವಿದ್ಯಾರ್ಥಿ ತಾಯಿಗೆ ಅಡ್ಜೆಸ್ಟ್ ಆಗು ಎಂದು ಪ್ರಿನ್ಸಿಪಾಲ್ ಮಗ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನ ನಾಗವಾರ ಬಳಿ ಇರುವ ಇಮ್ಯಾನುಯಲ್ ಸ್ಕೂಲ್‍ನಲ್ಲಿ ನಡೆದಿದೆ.ರೂತ ಚೆಲುವರಾಜ್ ಅಸಭ್ಯವಾಗಿ ವರ್ತಿಸಿದ ಪ್ರಿನ್ಸಿಪಾಲ್ ಮಗ. ಫೀಸ್ ಕಟ್ಟುವುದು ತಡವಾಗಿದ್ದಕ್ಕೆ ವಿದ್ಯಾರ್ಥಿ ಮಹಮದ್ ಫರಾನ್ ಖಾನ್‍ನ ಆಡ್ಮೀಷನ್ ಮಾಡಿಕೊಳ್ಳದೆ ಲೇಡಿ ಪ್ರಿನ್ಸಿಪಾಲ್ ಸತಾಯಿಸುತ್ತಿದ್ದಳು. ಅಲ್ಲದೆ ಶಾಲೆಗೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಲು ಹೋದ ವಿದ್ಯಾರ್ಥಿಯ ತಾಯಿಯೊಂದಿಗೆ ಚೆಲುವರಾಜ್ ಅಸಭ್ಯವಾಗಿ ವರ್ತಿಸಿದ್ದಾನೆ.ಕಾಮುಕ ಚೆಲುವರಾಜ್ ಫೀಸ್ ಕೊಡಬೇಡ, ರೂಂಗೆ ಬಾ ಎಂದು ಕೊಠಡಿಯಲ್ಲೆ ವಿದ್ಯಾರ್ಥಿ ತಾಯಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೆ ಫೀಸ್ ಕಟ್ಟಲು ಆಗಿಲ್ಲ ಅಂದರೆ ನನ್ನ ಜೊತೆ ಅಡ್ಜಸ್ಟ್ ಮಾಡಿಕೊಳ್ಳುವಂತೆ ರೂತ ಚೆಲುವರಾಜ್ ವಿದ್ಯಾರ್ಥಿಯ ತಾಯಿಯ ಬಳಿ ಹೇಳಿದ್ದಾನೆ. ಕಾಮುಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ವಿದ್ಯಾರ್ಥಿಯ ತಾಯಿ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪ್ರಕರಣ ದಾಖಲಾಗಿದೆ.ದೂರಿನಲ್ಲಿ ಏನಿದೆ?
ನನ್ನ ಮಗ ಇಮ್ಯಾನುಯಲ್ ಶಾಲೆಯಲ್ಲಿ ಓದುತ್ತಿದ್ದು, 8ನೇ ತರಗತಿ ಅಡ್ಮಿಷನ್ ಕೇಳಲು ಶಾಲೆಗೆ ಹೋದಾಗ ಚೆಲುವರಾಜ್ ಮತ್ತು ಸ್ಯಾಮ್ ಅವರು ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೆ ನನ್ನ ಮೈಕೈ ಮುಟ್ಟಿ ಹೊರತಳ್ಳಿದ್ದಾರೆ. ಫೀಸ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ ಫೀಸ್ ಕಟ್ಟಲು ತೊಂದರೆಯಾದರೆ ನನ್ನ ಜೊತೆ ಹೇಳು ಅಡ್ಮಿಷನ್ ಮತ್ತು ಫೀಸ್ ಕಡಿಮೆ ಮಾಡುತ್ತೇನೆ ಎಂದಾಗ ನಾನು ಒಪ್ಪದೇ ಪ್ರತಿಭಟಿಸಿದಕ್ಕೆ ಚೆಲುವರಾಜ್ ಕೋಪಿತವಾಗಿ ವರ್ತಿಸಿ ನನ್ನನ್ನು ಬಲವಂತವಾಗಿ ಕೈಮುಟ್ಟಿ ಹೊರ ಹಾಕಿದ್ದಾನೆ. ಇದು ಮೇ 28ರಂದು ಈ ಘಟನೆ ನಡೆದಿದ್ದು, ಅಲ್ಲಿಂದಾಚೆಗೆ ಸುಮಾರು 3-4 ಬಾರಿ ಶಾಲೆಗೆ ಹೋದಾಗ ಕೂಡ ಆಡ್ಮಿಷನ್ ಮಾಡಿಕೊಳ್ಳದೇ ಚೆಲುವರಾಜ್, ಸ್ಯಾಮ್ ದುವರ್ತನೆ ತೋರಿದ್ದಾರೆ. ಈಗ ನನ್ನ ಮಗ ಇದನ್ನೆಲ್ಲ ನೋಡಿ ಶಾಲೆಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದಾನೆ. ದಯವಿಟ್ಟು ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಿ ಎಂದು ಕೋರಿಕೊಳ್ಳುತ್ತೇನೆ.Sign in to your account
Username or Email Address


Password

 Remember Me


