ಬೆಂಗಳೂರು: ನಟಿ ಶ್ರುತಿ ಮಗಳು ಗೌರಿ ತಂದೆಯ ಬಗ್ಗೆ ಬರೆದು ಒಂದು ಭಾವನಾತ್ಮಕ ಪೋಸ್ಟ್ ಹಾಕಿದ್ದರು. ಇದರಿಂದ ನೆಟ್ಟಿಗರು ಶ್ರುತಿ ವಿರುದ್ಧ ಕಾಮೆಂಟ್ಸ್ ಮಾಡುತ್ತಿದ್ದರು. ಇದನ್ನು ನೋಡಿದ ಗೌರಿ ‘ಇನ್ನೊಬ್ಬರ ಜೀವನದ ಬಗ್ಗೆ ಸುಮ್ಮನೆ ಕಾಮೆಂಟ್ಸ್ ಮಾಡಬೇಡಿ’ ಎಂದು ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಈ ಬಗ್ಗೆ ಇನ್‍ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಗೌರಿ, “ಇತ್ತೀಚಿಗೆ ನಾನು ಅಪ್ಪನ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಒಂದು ಪೋಸ್ಟ್ ಹಾಕಿದ್ದೆ. ಆದರೆ ಆ ಪೋಸ್ಟ್ ಗೆ ಅಮ್ಮನ ವಿರುದ್ಧ ಕಾಮೆಂಟ್ ಮಾಡುತ್ತಿದ್ದಾರೆ. ಅದನ್ನು ನೋಡಿ ನನಗೆ ಬೇಸರವಾಗಿದೆ. ಅಪ್ಪನಿಗೆ ಫೋನ್ ಮಾಡಲು, ಅವರನ್ನು ಭೇಟಿ ಮಾಡಲು ಅಮ್ಮನೇ ಕಳುಹಿಸುವುದು. ನಾನು ಮಾಡಿದ್ದ ಪೋಸ್ಟ್ ಅಪ್ಪನ ಬಗ್ಗೆ ಇದ್ದ ಪ್ರೀತಿಯನ್ನು ತಿಳಿಸುತ್ತದೆ ಹೊರತು ಅಮ್ಮನ ಬಗ್ಗೆ ಇರುವ ಬೇಸರವಲ್ಲ. ಹೀಗಾಗಿ ದಯವಿಟ್ಟು ಅಮ್ಮನ ಬಗ್ಗೆ ಕಾಮೆಂಟ್ಸ್ ಮಾಡಬೇಡಿ” ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.“ನನ್ನ ಹುಟ್ಟಿಗೆ ಅಪ್ಪ ಮಾತ್ರ ಕಾರಣರಾಗಿದ್ದಾರೆ. ಆದರೆ ಅಂದಿನಿಂದ ಪ್ರೀತಿಯಿಂದ ನನ್ನನ್ನು ನೋಡಿಕೊಳ್ಳುತ್ತಿರುವುದು ಅಮ್ಮ. ಅವರ ಬಗ್ಗೆ ಗೊತ್ತಿಲ್ಲದೆ ಮಾತನಾಡುವುದು ತಪ್ಪು. ನಾನು ಅವರಿಬ್ಬರನ್ನು ಸಮಾನವಾಗಿ ಪ್ರೀತಿಸುತ್ತೇನೆ. ನಿಮಗೆ ಸತ್ಯ ತಿಳಿಯದೆ ಮಾತನಾಡುವುದು ಸರಿಯಿಲ್ಲ. ಇನ್ನೊಬ್ಬರ ಜೀವನದ ಬಗ್ಗೆ ಸುಮ್ಮನೆ ಕಾಮೆಂಟ್ಸ್ ಗಳನ್ನು ಮಾಡಬೇಡಿ ಧನ್ಯವಾದಗಳು” ಎಂದು ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಅಪ್ಪನ ಬಗ್ಗೆ ಪೋಸ್ಟ್:
“ಹುಟ್ಟುಹಬ್ಬದ ಶುಭಾಶಯಗಳು ಅಪ್ಪ. ನೀವು ನನ್ನ ಮೊದಲ ಪ್ರೀತಿ ಮತ್ತು ನನ್ನ ನೆಚ್ಚಿನ ನಾಯಕನಾಗಿದ್ದೀರಿ. ನಿಮ್ಮ ಮೇಲಿನ ಪ್ರೀತಿ ಹಾಗೂ ನಮ್ಮಿಬ್ಬರ ನಡುವಿನ ಬಾಂಧವ್ಯವನ್ನು ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಆದರೆ ನಿಮ್ಮ ಜೊತೆ ಅತೀ ಶೀಘ್ರದಲ್ಲೇ ಕಾಲ ಕಳೆಯಲು ಕಾಯುತ್ತಿದ್ದೀನಿ” ಎಂದು ಪ್ರೀತಿಯಿಂದ ಬರೆದು ಪೋಸ್ಟ್ ಮಾಡಿದ್ದರು. ಜೊತೆಗೆ ತಮ್ಮ ತಂದೆ ಜೊತೆಗಿದ್ದ ಫೋಟೋವನ್ನು ಕೂಡ ಶೇರ್ ಮಾಡಿಕೊಂಡಿದ್ದರು.Sign in to your account
Username or Email Address


Password

 Remember Me


