ಮೈಸೂರು: ಅನುಮಾನಾಸ್ಪದವಾಗಿ ಗೃಹಿಣಿ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಹಂಪಾಪುರ ಗ್ರಾಮದಲ್ಲಿ ನಡೆದಿದೆ.ಮೃತಳನ್ನು ಜ್ಯೋತಿ (24) ಎಂದು ಗುರುತಿಸಲಾಗಿದೆ. ಈಕೆ ಕೆ.ಆರ್ ನಗರದ ಹೊಸರಾಮನಹಳ್ಳಿ ನಿವಾಸಿಯಾಗಿದ್ದು, ಎರಡು ತಿಂಗಳ ಹಿಂದೆ ಹಂಪಾಪುರದ ಉಮೇಶ್ ಜೊತೆ ವಿವಾಹ ಆಗಿತ್ತು.ಉಮೇಶ್ ವೃತ್ತಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ನೇಣು ಬಿಗಿದ ಸ್ಥಿತಿಯಲ್ಲಿ ಜ್ಯೋತಿಯ ಶವ ಪತ್ತೆಯಾಗಿದ್ದು, ಉಮೇಶ್ ಮತ್ತು ಅವರ ಮನೆಯವರು ಕೊಲೆ ಮಾಡಿದ್ದಾರೆ ಎಂದು ಮೃತಳ ಪೋಷಕರು ಆರೋಪ ಮಾಡಿದ್ದಾರೆ.ಈ ಬಗ್ಗೆ ಜ್ಯೋತಿ ಪೋಷಕರು ಕೆ.ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.Sign in to your account
Username or Email Address


Password

 Remember Me


