ಬೀದರ್: ನಗರದಲ್ಲಿ ನಡೆದ ಕೆಡಿಪಿ ಸಭೆಯ ವೇದಿಕೆ ಮೇಲೆ ಸಂಸದ ಸಂಸದ ಭಗವಂತ ಖೂಬಾ ಅವರು ನೀರು ಕೊಡಿಸಲಾಗ ನಾಲಾಯಕ್ ಸರ್ಕಾರ ಎಂದು ಹೇಳಿಕೆ ನೀಡಿದ್ದು, ಈ ವೇಳೆ ಸಚಿವ ಬಂಡೆಪ್ಪ ಕಾಶೆಂಪೂರ್ ಹಾಗೂ ಸಂಸದರ ಮಧ್ಯೆ ತೀವ್ರ ವಾಗ್ದಾಳಿಗೆ ಕಾರಣವಾಯಿತು.ಇಂದು ಬೀದರ್ ನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಬರ ನಿರ್ವಹಣೆ ಸಭೆಯಲ್ಲಿ ನಗರದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳೊಂದಿಗೆ ಸಂಸದ ಭಗವಂತ ಖೂಬಾ ಅವರು ಸಭೆ ನಡೆಸಿ ಮಾತನಾಡಿದರು. ಈ ವೇಳೆ ಅಧಿಕಾರಿಗಳು ನಗರದ ಹಲವೆಡೆ ನೀರಿನ ಸಮಸ್ಯೆ ಇದೆ ಎಂದು ಹೇಳಿದರು. ಈ ಮಾತಿಗೆ ಪ್ರತಿಕ್ರಿಯೆ ನೀಡಿದ ಸಂಸದರು ಹಾಗಾದರೆ ಸರ್ಕಾರದ ನಾಲಾಯಕ್ ಇದೆಯಾ ಎಂದು ಹೇಳಿದರು…. ಈ ಹೇಳಿಕೆಯಿಂದ ಕೆರಳಿದ ಸಚಿವ ಬಂಡೆಪ್ಪ ಖಾಶೆಂಪೂರ್ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ ಎಂದು ಸಂಸದರ ವಿರುದ್ಧ ಗರಂ ಆದರು. ಆ ಬಳಿಕ ತಾನು ಅಧಿಕಾರಿಗೆ ಈ ರೀತಿ ಹೇಳಿದ್ದಾಗಿ ಸಂಸದರು ಸಮಜಾಯಿಸಿ ನೀಡಿದರು.ಸಭೆ ಬಳಿಕ ಮಾಧ್ಯಮಗಳಿಗೆ ಗ್ರಾಮ ವಾಸ್ತವ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಈಗಾಗಲೆ ಸಿಎಂ ಜೊತೆ ಮಾತನಾಡಿದ್ದು ಜಿಲ್ಲೆಯ ಗಡಿ ಭಾಗದ ಎರಡು ಗ್ರಾಮಗಳಲ್ಲಿ ವಾಸ್ತವ್ಯ ಮಾಡುವ ಪ್ಲಾನ್ ಇದೆ ಎಂದರು. ಈ ಹಿಂದೆ ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ನಡೆಸಿದ್ದ ವೇಳೆ ಸಿಎಂ ಕುಮಾರಸ್ವಾಮಿ ಅವರು ಬೀದರ್ ನಲ್ಲಿ ಗ್ರಾಮ ವಾಸ್ತವ್ಯ ನಡೆಸಿದ್ದರು. ಅಂದು ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಣಿಕಣಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು.Sign in to your account
Username or Email Address


Password

 Remember Me


