ದಾವಣಗೆರೆ: ಕರ್ಕಶವಾಗಿ ಶಬ್ದ ವಾಗುವ ಸೈಲೆನ್ಸರ್ ಅಳವಡಿಕೆ ಮಾಡಿದ ದ್ವಿಚಕ್ರ ವಾಹನಗಳ ಮೇಲೆ ದಾವಣಗೆರೆ ಪೊಲೀಸರು ಸಮರ ಸಾರಿದ್ದಾರೆ.ದಾವಣಗೆರೆ ನಗರದಲ್ಲಿ ಇಂದು ಆರ್‌ಟಿಓ ಅಧಿಕಾರಿಗಳು ಹಾಗೂ ಪೊಲೀಸರ ಜಂಟಿಯಾಗಿ ಕಾರ್ಯಚರಣೆ ಮಾಡಿ 70ಕ್ಕೂ ಹೆಚ್ಚು ಬುಲೆಟ್ ಸೇರಿದಂತೆ ಹಲವು ಬೈಕ್ ಗಳನ್ನು ಸೀಜ್ ಮಾಡಿದ್ದಲ್ಲದೆ ದಂಡ ಹಾಕಿದ್ದಾರೆ. ಸೀಜ್ ಮಾಡಲಾದ ಬೈಕ್‍ಗಳ ಸೈಲೆನ್ಸರ್ ಕಿತ್ತು ಹಾಕಿ ಜೆಸಿಬಿಯಿಂದ ಪುಡಿ ಮಾಡಿ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ.ಯುವಕರು ತಮ್ಮ ಬೈಕ್‍ಗಳಿಗೆ ಕರ್ಕಶವಾಗಿ ಶಬ್ದಮಾಡುವ ಸೈಲೆನ್ಸರ್ ಅಳವಡಿಸಿಕೊಂಡು ಶಬ್ದ ಮಾಲಿನ್ಯದ ಜೊತೆಗೆ ಪರಿಸರ ಮಾಲಿನ್ಯ ಮಾಡಿಕೊಂಡು ಹೋಗುತ್ತಿದ್ದರು. ಇದರಿಂದ ರೋಸಿಹೋದ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.ನಗರದಲ್ಲಿ ಕರ್ಕಶವಾಗಿ ಶಬ್ದ ಮಾಡಿಕೊಂಡು ಓಡಾಡುವ ದ್ವಿಚಕ್ರ ವಾಹನಗಳು ಬಹಳ ಇವೆ. ಅವುಗಳನ್ನು ಸಹ ಹಿಡಿದು ದಂಡ ವಿಧಿಸುವುದರ ಜೊತೆ ಸೈಲೆನ್ಸರ್ ಪುಡಿ ಪುಡಿ ಮಾಡುವುದಾಗಿ ಆರ್‌ಟಿಓ ಅಧಿಕಾರಿಗಳು ತಿಳಿಸಿದ್ದಾರೆ.Sign in to your account
Username or Email Address


Password

 Remember Me


