ಹುಬ್ಬಳ್ಳಿ: ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪಾರಾದ ಘಟನೆ ಹುಬ್ಬಳ್ಳಿಯ ಬಂಕಾಪುರ್ ಚೌಕ್ ಬಳಿ ನಡೆದಿದೆ.ಲಕ್ಷ್ಮೇಶ್ವರ ಮಾರ್ಗದಿಂದ ಹುಬ್ಬಳ್ಳಿಗೆ ಕೆಎಸ್‌ಆರ್‌ಟಿಸಿ ಬಸ್ ಬರುತ್ತಿತ್ತು. ಈ ವೇಳೆ ಬಸ್ಸಿನ ಹಿಂಬಂದಿಯ ಚಕ್ರದ ಟೈರ್ ಚಲಿಸುವ ವೇಳೆ ಸಂಪೂರ್ಣ ಹಾಳಾಗಿತ್ತು. ಇದನ್ನು ಅರಿತ ಬಸ್ ಚಾಲಕ ಸುಮಾರು 7 ಕಿ.ಮೀ ಕ್ರಮಿಸಿ ವಾಹನ ನಿಲ್ಲಿಸಿದ್ದಾರೆ.ಬಸ್ ಚಾಲಕ ಹುಬ್ಬಳ್ಳಿ ಬಂಕಾಪೂರ್ ಚೌಕಿನವರೆಗೆ ತಂದು ನಿಲ್ಲಿಸಿದ್ದಾರೆ. ಚಾಲಕನ ಸಮಯ ಪ್ರಜ್ಞೆಗೆ ಪ್ರಯಾಣಿಕರು ಅಚ್ಚರಿಗೊಂಡಿದ್ದರು. ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಚಾಲಕನ ಸಮಯ ಪ್ರಜ್ಞೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.Sign in to your account
Username or Email Address


Password

 Remember Me


