ಬೆಂಗಳೂರು: ಮೂರು ಜನ ಯುವತಿಯರು ಮದ್ಯದ ಅಮಲಿನಲ್ಲಿ ಆಟೋ ಚಾಲಕನಿಗೆ ಕಪಾಳ ಮೋಕ್ಷ ಮಾಡಿದ ಘಟನೆ ನಗರದಲ್ಲಿ ನಡೆದಿದೆ.ಸುರೇಂದ್ರ ಬಾಬು ಯುವತಿಯರಿಂದ ಕಾಪಾಳಮೋಕ್ಷಕ್ಕೆ ಒಳಗಾದ ಆಟೋ ಚಾಲಕ. ಶಿವಾನಂದ ಸರ್ಕಲ್ ಬಳಿ ಶುಕ್ರವಾರ ಘಟನೆ ನಡೆದಿದ್ದು, ಆಟೋ ಚಾಲಕ ಸುರೇಂದ್ರ ಬಾಬು ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.ಕಂಠಪೂರ್ತಿ ಕುಡಿದಿದ್ದ ಮೂವರು ಅಪರಿಚಿತ ಯುವತಿಯರು ಎಂಜಿ ರೋಡ್‍ನಲ್ಲಿ ಆಟೋ ಹತ್ತಿದ್ದರು. ವಿಜಯನಗರಕ್ಕೆ ತಮ್ಮನ್ನು ಬಿಡುವಂತೆ ತಿಳಿದ್ದರು. ಆದರೆ ಮದ್ಯದ ಗುಂಗಿನಲ್ಲಿದ್ದ ಅವರು ಆಟೋದಲ್ಲಿ ಕಿರುಚಾಡಲು ಆರಂಭಿಸಿದರು. ಇದರಿಂದ ಸ್ವಲ್ಪ ಕೋಪಗೊಂಡು, ಯಾಕೆ ಕೂಗಾಡುತ್ತೀರಾ? ಸುಮ್ಮನೆ ಕುಳಿತುಕೊಳ್ಳಿ ಎಂದು ಹೇಳಿದ್ದೆ. ಈ ವೇಳೆ ನನ್ನ ಜೊತೆಗೆ ಜಗಳ ಆರಂಭಿಸಿದರು. ಬಳಿಕ ಆಟೋದಿಂದ ಇಳಿದು ಅವಾಚ್ಯ ಪದಗಳಿಂದ ನಿಂದಸಿದರು. ಅಷ್ಟೇ ಅಲ್ಲದೆ ಯುವತಿಯೊಬ್ಬಳು ನನಗೆ ಕಪಾಳ ಮೋಕ್ಷ ಮಾಡಿದ್ದಾಳೆ ಎಂದು ಸುರೇಂದ್ರ ಬಾಬು ದೂರಿದ್ದಾರೆ.ಈ ಸಂಬಂಧ ಸುರೇಂದ್ರ ಬಾಬು ಅವರು ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಯುವತಿಯರ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.






 Advertisement 




Sign in to your account
Username or Email Address


Password

 Remember Me


