ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್, ನಟಿ ರಾಧಿಕಾ ಪಂಡಿತ್ ದಂಪತಿಯ ಮನೆಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ. ಮಗಳು ಮನೆಗೆ ಬಂದು ಆರು ತಿಂಗಳಾಗಿರುವ ಖುಷಿಯನ್ನು ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ನಮ್ಮ ಏಂಜೆಲ್ `ಬೇಬಿ ವೈಆರ್’ ಮನೆಗೆ ಬಂದು ಆರು ತಿಂಗಳು ಕಳೆದಿದೆ. ಈ ವಿಶೇಷ ದಿನದಲ್ಲಿ ಅವಳದೊಂದು ಚಿಕ್ಕ ನೋಟ. ಪುತ್ರಿಯ ಮೇಲೆ ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಸದಾ ಇರಲಿ ಎಂದು ರಾಧಿಕಾ ಪಂಡಿತ್ ಇನ್‍ಸ್ಟಾಗ್ರಾಮ್‍ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.https://www.instagram.com/p/ByNE31QgF7K/ರಾಧಿಕಾ ಪಂಡಿತ್ ಅವರು ಮುದ್ದಿನ ಮಗಳ ಫೋಟೋಶೂಟ್ ಮಾಡಿಸಿದ್ದು, ಈ ವಿಡಿಯೋವನ್ನ ಇನ್ಸ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಸಾನಿಯಾ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು, ಭುವನ್ ಹಾಗೂ ಮನೀಷ್ ಕ್ಯಾಮೆರಾದಲ್ಲಿ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಮಗಳ ಸ್ಟೈಲಿಷ್ ಲುಕ್ ಸೆರೆ ಆಗಿದೆ. ಮೇ 7ರಂದು ತಮ್ಮ ಮುದ್ದಿನ ಮಗಳ ಮೊಗವನ್ನು ಸೋಷಿಯಲ್ ಮೀಡಿಯಾದ ಮೂಲಕ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಜಗತ್ತಿಗೆ ತೋರಿಸಿದ್ದರು.Sign in to your account
Username or Email Address


Password

 Remember Me


