ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಸದ್ಯಕ್ಕೆ ‘ಕೆಜಿಎಫ್-2’ ಸಿನಿಮಾಗಾಗಿ ವರ್ಕೌಟ್ ಮಾಡುತ್ತಿದ್ದು, ಇದೀಗ ರಾಕಿಭಾಯ್ ಯಶ್ ಅವರ ಹೊಸ ಲುಕ್‍ನ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಫೋಟೋದಲ್ಲಿ ಯಶ್ ಉದ್ದ ಕೂದಲು ಮತ್ತು ಗಡ್ಡ ಬಿಟ್ಟಿದ್ದು, 90ರ ದಶಕದ ರಾಯಲ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಚೇರ್ ಮೇಲೆ ಕುಳಿತು ಕೈಯಲ್ಲಿ ಕೋಲಿನ ಸ್ಟಿಕ್ ಹಿಡಿದುಕೊಂಡಿದ್ದಾರೆ. ಯಶ್ ಅವರ ನ್ಯೂ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದು, ಇದು ಯಾವ ಸಿನಿಮಾದ ಲುಕ್ ಎಂದು ತಲೆಕೆಡಿಸಿಕೊಳ್ಳುತ್ತಿದ್ದಾರೆ.ಈ ಫೋಟೋ ಯಾವ ಸಿನಿಮಾದ್ದು ಅಲ್ಲ. ಬದಲಾಗಿ ಜಾಹೀರಾತಿನ ಫೋಟೋಶೂಟ್‍ಗೆ ಯಶ್ ಈ ರೀತಿ ಪೋಸ್ ಕೊಟ್ಟಿದ್ದಾರೆ. ಯಶ್ ‘ಕೆಜಿಎಫ್’ ಸಿನಿಮಾದಲ್ಲಿ ಉದ್ದ ಕೂದಲು ಮತ್ತು ದಾಡಿ ಬಿಟ್ಟಿದ್ದರು. ‘ಪಾರ್ಟ್ 2’ ನಲ್ಲೂ ಅದೇ ಲುಕ್‍ನಲ್ಲಿ ಯಶ್ ಮಿಂಚಲಿದ್ದಾರೆ.ಸದ್ಯಕ್ಕೆ ನಟ ಯಶ್ ಇದೇ ಜೂನ್ 6 ರಂದು ‘ಕೆಜಿಎಫ್-2’ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಮೊದಲಿಗೆ ಮೈಸೂರಿನಲ್ಲಿ ನಡೆಯುವ ಶೂಟಿಂಗ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ.Sign in to your account
Username or Email Address


Password

 Remember Me


