ಬೆಂಗಳೂರು: ಮನೆ ಹೊರಗಡೆ ಇರಿಸಲಾಗಿದ್ದ ಶೂ ಒಳಗೆ ಸೈಲೆಂಟಾಗಿ ಕೂತಿದ್ದ ಪುಟಾಣಿ ಹಾವಿನ ಮರಿಗಳನ್ನು ಕಂಡು ಮನೆಮಂದಿಯಲ್ಲ ಗಾಬರಿಗೊಂಡಿದ್ದಾರೆ.ಶೂ ಧರಿಸುವಾಗ ಎಚ್ಚರವಹಿಸಿ ಯಾಕೆಂದರೆ ಯಾವ ಹುತ್ತದಲ್ಲಿ ಯಾವ ಹಾವಿರತ್ತೋ ಎಂಬ ಮಾತಿನಂತೆ ಈಗ ಯಾವ ಶೂನಲ್ಲಿ ಯಾವ ಹಾವಿರತ್ತೋ ಎನ್ನುವ ಸ್ಥಿತಿ ಬಂದಿದೆ. ಹೌದು. ಬೆಂಗಳೂರಿನ ವಿದ್ಯಾರಣ್ಯಪುರದ ಮನೆಯೊಂದರಲ್ಲಿ ಶೂನೊಳಗೆ ಹಾವಿನ ಮರಿ ಸೇರಿಕೊಂಡ ಘಟನೆ ನಡೆದಿದೆ. ಮನೆಯಲ್ಲಿದ್ದ ಶೂ ಹಾಗೂ ಚಪ್ಪಲಿ ರಾಶಿಯಲ್ಲಿದ್ದ ಶೂ ಒಳಗೆ ಹಾವಿನ ಮರಿಯೊಂದು ಸೇರಿಕೊಂಡಿದ್ದು, ಚಪ್ಪಲಿ ರಾಶಿಯಲ್ಲಿ ಎನೋ ಸದ್ದಾಗುತ್ತಿದೆ ಎಂದು ಮನೆಮಂದಿ ಹತ್ತಿರ ಹೋಗಿ ನೋಡಿದಾಗ ಹಾವಿನ ಮರಿ ಪತ್ತೆಯಾಗಿದೆ. ಹಾವನ್ನು ಕಂಡು ಗಾಬರಿಯಾಗಿ ಮನೆಯವರು ಉರಗ ತಜ್ಞರಿಗೆ ಮಾಹಿತಿ ತಿಳಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಉರಗ ತಜ್ಞ ರಾಜೇಶ್ ಅವರು ಹಾವನ್ನು ಶೂ ಇಂದ ಹೊರತೆಗೆದು ರಕ್ಷಿಸಿದ್ದಾರೆ.ಇನ್ನೊಂದೆಡೆ, ಪುಟ್ಟ ನಾಗರಾಜ ದೊಮ್ಮಲೂರಿನಲ್ಲಿ ಇರುವ ಮನೆಯೊಂದರ ಬಾಗಿಲಿನಿ ಮುಂದೆ ಸೈಲೆಂಟಾಗಿ ಕೂತಿತ್ತು. ಬೆಳಗ್ಗೆ ಮನೆಮಂದಿ ಬಾಗಿಲು ತೆಗೆಯುತ್ತಿದ್ದಂತೆ ಹಾವಿನ ಮರಿಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಬಳಿಕ ಉರಗ ತಜ್ಞ ಜಯರಾಜ್ ಹಾವನ್ನು ಸೆರೆಹಿಡಿದು ರಕ್ಷಿಸಿ ಮನೆಮಂದಿಯ ಆತಂಕ ದೂರ ಮಾಡಿದ್ದಾರೆ.https://www.youtube.com/watch?v=uAMKmcXmC-USign in to your account
Username or Email Address


Password

 Remember Me


