ಬೆಂಗಳೂರು: ಲೋಕಸಭಾ ಚುನಾವಣೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲಾ ಬಿಜೆಪಿ ನಾಯಕರು, ಬೆಂಬಲಿಗರು ತಮ್ಮ ಟ್ವಿಟ್ಟರ್ ಖಾತೆಯ ಹೆಸರಿನ ಮುಂದೆ ‘ಚೌಕಿದಾರ್’ ಎಂದು ಬರೆದುಕೊಂಡಿದ್ದರು. ಫಲಿತಾಂಶದ ದಿನದಂದೇ ಪ್ರಧಾನಿಗಳ ನಿರ್ದೇಶನದಂತೆ ಎಲ್ಲರೂ ಚೌಕಿದಾರ್ ಹೆಸರನ್ನು ತೆಗೆದುಕೊಂಡಿದ್ದರು. ಇದೀಗ ಕನ್ನಡದ ಗೋಲ್ಡನ್ ಸ್ಟಾರ್ ಚೌಕಿದಾರ್ ಆಗಿ ಗಾಂಧಿ ನಗರದಲ್ಲಿ ಧೂಳೆಬ್ಬಿಸಲು ಸಜ್ಜಾಗುತ್ತಿದ್ದಾರೆ.ರಥಾವರ ಸಿನಿಮಾ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್’ ಚಿತ್ರದಲ್ಲಿ ಗಣೇಶ್ ನಟಿಸುತ್ತಿದ್ದಾರೆ. ಫಿಲಂ ಚೇಂಬರ್ ನಿಂದ ಈಗಾಗಲೇ ಚಿತ್ರತಂಡ ‘ಚೌಕಿದಾರ್’ ಟೈಟಲ್ ಗೆ ಅನುಮತಿಯನ್ನು ಪಡೆದುಕೊಂಡಿದೆ.ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಗಳಲ್ಲಿ ಹೊಸ ಪ್ರಯೋಗಗಳಿಗೆ ಮುಂದಾಗಿದ್ದು, ಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ಚೌಕಿದಾರ್ ಸಿನಿಮಾದಲ್ಲಿ 55 ವರ್ಷದ ವ್ಯಕ್ತಿಯ ಪಾತ್ರದಲ್ಲಿ ಗಣೇಶ್ ನಟಿಸುತ್ತಿದ್ದು, ರಾಜಕೀಯಕ್ಕೂ ಈ ಕಥೆಗೂ ಏನಾದರೂ ಸಂಬಂಧ ಇದೆಯಾ ಎಂಬ ಸಸ್ಪೆನ್ಸ್ ಚಿತ್ರತಂಡ ಬಿಟ್ಟುಕೊಟ್ಟಿಲ್ಲ.


 Advertisement 







 Advertisement 




Sign in to your account
Username or Email Address


Password

 Remember Me


