ಬೆಂಗಳೂರು: ಸ್ಯಾಂಡಲ್‍ವುಡ್ ಕರಿಚಿರತೆ ದುನಿಯಾ ವಿಜಯ್ ಅವರು ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.ದುನಿಯಾ ವಿಜಯ್ ತಮ್ಮ ಮುಂಬರುವ ‘ಸಲಗ’ ಚಿತ್ರತಂಡದ ಜೊತೆ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿದ್ದು, ಈಗ ಈ ಫೋಟೋಗಳನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಆದರೆ ದುನಿಯಾ ವಿಜಯ್ ಭೇಟಿ ಮಾಡಿದ್ದು ಯಾಕೆ ಎಂಬ ವಿಷಯವನ್ನು ಹೇಳಿಕೊಂಡಿಲ್ಲ.“ಸಲಗ ಚಿತ್ರತಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಆದ ಕ್ಷಣ” ಎಂದು ಟ್ವಿಟ್ಟರಿನಲ್ಲಿ ಹಂಚಿಕೊಂಡಿರುವ ಫೋಟೋದೊಂದಿಗೆ ಬರೆದುಕೊಂಡಿದ್ದಾರೆ.#ಸಲಗ ಚಿತ್ರತಂಡ‌ ಮಾಜಿ ಮುಖ್ಯಮಂತ್ರಿ @siddaramaiah ರವರನ್ನ ಬೇಟಿ‌ ಆದ ಕ್ಷಣ..@cineloka @namtalkies @NamCinema @suvarnanewstv @publictvnews pic.twitter.com/EDJZk8tq3b— Duniya Vijay (@OfficialViji) June 1, 2019ಇತ್ತೀಚೆಗೆ ಸಲಗ ಚಿತ್ರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈರಲ್ ಫೋಟೋದಲ್ಲಿ ದುನಿಯಾ ವಿಜಯ್, ಪೊಲೀಸ್ ವೇಷದಲ್ಲಿ ಇದ್ದ ಡಾಲಿ ಧನಂಜಯ್ ಅವರನ್ನು ಗುರಾಯಿಸುತ್ತಿದ್ದರು.ಈ ಚಿತ್ರವನ್ನು ರಘು ಶಿವಮೊಗ್ಗ ಅವರು ನಿರ್ದೇಶನ ಮಾಡುತ್ತಿದ್ದು, ಕೆ.ಪಿ ಶ್ರೀಕಾಂತ್ ಅವರು ಚಿತ್ರಕ್ಕೆ ಬಂಡವಾಳ ಹೂಡಲು ಮುಂದಾಗಿದ್ದಾರೆ. ಈ ಚಿತ್ರಕ್ಕೆ ಚರಣ್ ರಾಜ್ ಹಿನ್ನೆಲೆ ಸಂಗೀತ ನೀಡಲಿದ್ದು, ನವೀನ್ ಸಜ್ಜು ಸಂಗೀತ ನಿರ್ದೇಶಕರಾಗಿ ಹೊಸ ಟ್ರೆಂಡ್ ಸೆಟ್ ಮಾಡಲು ತಯಾರಿ ಆರಂಭಿಸಿದ್ದಾರೆ.Sign in to your account
Username or Email Address


Password

 Remember Me


