ರಾಯಚೂರು: ಯುವಕನ ಮನವಿಗೆ ಸ್ಪಂದಿಸಿ ಪ್ರಧಾನಿ ನರೇಂದ್ರ ಮೋದಿ ಬೆಳಕನ್ನೆ ಕಾಣದ ಜಿಲ್ಲೆಯ ದೊಡ್ಡಿಗಳಿಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ.ಲಿಂಗಸುಗೂರಿನ ಗಲಗಿನ ದೊಡ್ಡಿ, ಕಾಳಪ್ಪನ ದೊಡ್ಡಿ ಹಾಗೂ ಗುಳೆದರ ದೊಡ್ಡಿಗಳಿಗೆ ವಿದ್ಯುತ್ ಸಂಪರ್ಕ ನೀಡುವಂತೆ ದೇವರಬುಪೂರು ಗ್ರಾಮದ ಯುವಕ ಅಮರೇಶ್ ಪ್ರಧಾನಿಗೆ ಟ್ವೀಟ್ ಮಾಡಿದ್ದರು. ಯುವಕನ ಟ್ವೀಟ್‍ಗೆ ಸ್ಪಂದಿಸಿ ಮೂರು ದೊಡ್ಡಿಗಳಿಗೆ ವಿದ್ಯುತ್ ಸಂಪರ್ಕ ನೀಡುವಂತೆ ಆದೇಶ ನೀಡಿದ್ದಾರೆ.2018 ಸೆಪ್ಟೆಂಬರ್ 15 ರಂದು ಪ್ರಧಾನ ಮಂತ್ರಿ ಕಚೇರಿ ಟ್ವೀಟರ್ ಅಕೌಂಟ್ ಗೆ ಮಾಡಿದ ಅಮರೇಶ್ ಟ್ವೀಟ್ ಗೆ ಅಕ್ಟೋಬರ್ 1 ರಂದು ಕೇಂದ್ರ ಗ್ರಾಮೀಣ ವಿದ್ಯುದ್ದೀಕರಣ ನಿಗಮದಿಂದ ಸ್ಪಂದನೆ ಬಂದಿತ್ತು. ಯುವಕ ತಾನು ಮೋದಿ ಅವರಿಗೆ ಟ್ವೀಟ್ ಮಾಡಿದ ವಿಷಯವನ್ನು ವಿದ್ಯುತ್ ಸಂಪರ್ಕ ಕಾರ್ಯ ಆರಂಭಗೊಂಡಾಗ ಎಲ್ಲರ ಬಳಿ ಹೇಳಿಕೊಂಡಿದ್ದಾರೆ.ಸದ್ಯ ಜೆಸ್ಕಾಂ ಇಲಾಖೆಯಿಂದ ವಿದ್ಯುತ್ ಸಂಪರ್ಕ ಕಾರ್ಯ ಆರಂಭಿಸಿದ್ದು, ಕೇಂದ್ರ ಸರಕಾರದ ಸೌಭಾಗ್ಯ ಯೋಜನೆ ಅಡಿಯಲ್ಲಿ ಮೀಟರ್ ಅಳವಡಿಕೆ ಕಾರ್ಯ ಆರಂಭವಾಗಿದೆ. ವಿದ್ಯುತ್ ಕಂಬಗಳನ್ನು ಅಳವಡಿಸಿದ್ದು ವಿದ್ಯುತ್ ತಂತಿ ಎಳೆಯಲಾಗಿದೆ. ಈಗ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸುವ ಕಾರ್ಯ ನಡೆದಿದೆ.Sign in to your account
Username or Email Address


Password

 Remember Me


