ಕಲಬುರಗಿ: ಸಿಡಿಲಿಗೆ ಮನೆ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಕಾಳಗಿ ತಾಲೂಕಿನ ಮಂಗಲಗಿ ಗ್ರಾಮದಲ್ಲಿ ನಡೆದಿದೆ.ಅಬಿದಾಭಿ (60), ಅಲ್ದಿಯಾ (12), ಶಪೀಕ್ (10) ಮೃತರು. ಮೃತ ಅಬಿದಾಭಿ ಕಾಳಗಿ ತಾಲೂಕಿನ ಕುಕನೂರು ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಶುಕ್ರವಾರ ರಾತ್ರಿ ರಂಜಾನ್ ಹಬ್ಬದ ಇಫ್ತಿಯಾರ್ ಹಿನ್ನೆಲೆಯಲ್ಲಿ ಮಂಗಲಗಿ ಗ್ರಾಮಕ್ಕೆ ಬಂದಿದ್ದರು. ಮೂವರು ಕೂಡ ಸಂಬಂಧಿಗಳಾಗಿದ್ದು, ರಾತ್ರೀ ಊಟ ಮಾಡಿ ಒಂದೇ ಕಡೆ ಮಲಗಿದ್ದರು.ಇಂದು ನಸುಕಿನ ಜಾವದಲ್ಲಿ ಸಿಡಿಲು ಬಡಿದಿದೆ. ಪರಿಣಾಮ ಮಲಗಿದ್ದವರ ಮೇಲೆ ಮನೆ ಬಿದ್ದು, ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೂ ಈ ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸೇಡಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಘಟನೆ ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.Sign in to your account
Username or Email Address


Password

 Remember Me


