ಬಳ್ಳಾರಿ: ನಗರದಲ್ಲಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದಲ್ಲಿ ಈಗ ಅಕ್ರಮದ ಆರೋಪವೊಂದು ಕೇಳಿಬಂದಿದೆ.ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ನಡೆದ ಲಂಚಾವತಾರದ ಆಡಿಯೋ ಬಹಿರಂಗವಾಗಿದೆ. 10-15 ಲಕ್ಷ ರೂಪಾಯಿಗೆ ಪಡೆದು ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಗ್ರಂಥಪಾಲಕ ಕಟ್ಟಿಮನಿ ಹಾಗೂ ಅಭ್ಯರ್ಥಿ ಚಿದಾನಂದರ ನೇಮಕಾತಿಗೆ ಹಣ ಕೇಳಿದ ಆಡಿಯೋ ವೈರಲ್ ಆಗಿದೆ.
ಈ ಹಿಂದೆ ಚುನಾವಣಾ ನೀತಿ ಸಂಹಿತೆ ಇದ್ದಾಗ ನೇಮಕಾತಿ ನಡೆಸದಂತೆ ಸ್ವತ: ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರೂ ಕುಲಪತಿ ಸುಭಾಷ್ ನೇಮಕಾತಿ ಪ್ರಕ್ರಿಯೆ ಮುಂದುವರಿಸಿದ್ದು, ಅನುಮಾನಗಳಿಗೆ ಕಾರಣವಾಗಿತ್ತು. ಆದರೆ ಇದೀಗ ಅವ್ಯವಹಾರ ಬಯಲಿಗೆ ಬರುತ್ತಿದ್ದಂತೆಯೇ ಗ್ರಂಥಪಾಲಕ ಕಟ್ಟಿಮನಿಯನ್ನು ಕುಲಪತಿ ಸುಭಾಷ್ ಅಮಾನತುಗೊಳಿಸಿದ್ದಾರೆ.ಈ ಬಗ್ಗೆ ದೂರು ನೀಡದಂತೆ ಕುಲಪತಿಗಳ ಬೆಂಬಲಿಗರು ಬೆದರಿಕೆ ಹಾಕುತ್ತಿದ್ದಾರೆ ಎಂದು ಆಡಿಯೋದಲ್ಲಿ ಮಾತನಾಡಿರುವ ಚಿದಾನಂದ್ ಆರೋಪಿಸಿದ್ದಾರೆ.






 Advertisement 




Sign in to your account
Username or Email Address


Password

 Remember Me


