ಬೆಂಗಳೂರು: ನಾಲ್ಕನೇ ಬಾರಿಯೂ ಆಪರೇಷನ್ ಕಮಲ ಫ್ಲಾಪ್ ಆಗಿದೆ. ಈ ಸಲ ಆಪರೇಷನ್ ಕಮಲ ಆರಂಭಕ್ಕೂ ಮುನ್ನವೇ ಫೇಲ್ ಆಗಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.ಹೌದು. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರನ್ನು ನಂಬಿಸಿ ಐವರು ಶಾಸಕರು ಕೈಕೊಟ್ಟಿದ್ದಾರಂತೆ. ಕಾಂಗ್ರೆಸ್‍ನ ಐವರು ಅತೃಪ್ತರು ಕೈಕೊಟ್ಟಿದ್ದಕ್ಕೆ ಆಪರೇಷನ್ ಫೇಲ್ ಆಗಿದೆ. ಈ ಮೂಲಕ ಸಿಎಂ ಆಗುವ ಕನಸು ಕಂಡಿದ್ದ ಬಿಎಸ್‍ವೈಗೆ ನಿರಾಸೆಯಾಗಿದೆ ಎಂದು ಹೇಳಲಾಗುತ್ತಿದೆ.`ಕೈ’ ಕೊಟ್ಟ ಶಾಸಕರು ಯಾರು!
ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್, ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ, ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ರಾಣೆಬೆನ್ನೂರು ಶಾಸಕ ಆರ್.ಶಂಕರ್, ಮುಳಬಾಗಿಲು ಶಾಸಕ ನಾಗೇಶ್ ಇವರುಗಳು ಬಿಜೆಪಿ ಪಕ್ಷಕ್ಕೆ ಬರುತ್ತೇವೆ ಎಂದು ಹೇಳಿ ಇದೀಗ ಯಡಿಯೂರಪ್ಪ ಅವರಿಗೆ ಕೈ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.Sign in to your account
Username or Email Address


Password

 Remember Me


