ಬೆಂಗಳೂರು: ಲೋಕಸಭಾ ಚುನಾಚಣೆ ಪ್ರಚಾರದಲ್ಲಿ ತೊಡಗಿದ್ದ ರಾಜ್ಯ ರಾಜಕಾರಣದ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್, ಫಲಿತಾಂಶದ ನಂತರ ಸರ್ಕಾರದ ಉಳಿವಿಗೆ ಸರ್ಕಸ್ ನಡೆಯುತ್ತಿದ್ದರೂ ಮೌನಕ್ಕೆ ಶರಣಾಗಿದ್ದಾರೆ.ಕಳೆದ ನಾಲ್ಕು ದಿನದಲ್ಲಿ ಮೂರು ಬಾರಿ ಡಿ.ಕೆ ಶಿವಕುಮಾರ್ ಅವರು ಬಾಯಿಗೆ ಬಟ್ಟೆ ಕಟ್ಟಿಕೊಂಡಿದ್ದೇನೆ, ಕಣ್ಣು ಮುಚ್ಚಿಕೊಂಡಿದ್ದೇನೆ ಮತ್ತು ಕಿವಿಗೆ ಕಾಟನ್ ಹಾಕಿಕೊಂಡಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಆದರೆ ಇದಕ್ಕೆ ಬೇರೆಯದೆ ಕಾರಣ ಇದೆ ಎಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.ಕುಂದಗೋಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಡೆದ ಘಟನೆಯಿಂದ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ. ಡಿ.ಕೆ ಶಿವಕುಮಾರ್ ಕುಂದಗೋಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹೋಟೆಲ್‍ನಲ್ಲಿ ತಂಗಿದ್ದರು. ಆಗ ದೈವ ಮಾನವರೊಬ್ಬರ ಬಳಿ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಜ್ಯೋತಿಷ್ಯ ಕೇಳಿಸಿದ್ದರು.ಡಿ.ಕೆ. ಶಿವಕುಮಾರ್ ಜಾತಕ ನೋಡಿ ಭವಿಷ್ಯ ನುಡಿದ ದೈವ ಮಾನವ, ಡಿಸೆಂಬರ್ ನಂತರ ನಿಮಗೆ ರಾಜಯೋಗ ಇದೆ ಎಂದು ಭವಿಷ್ಯ ನುಡಿದಿದ್ದರು. ಈ ಹಿನ್ನೆಲೆಯಲ್ಲಿ ಡಿಸೆಂಬರ್ ವರೆಗೆ ಸುಮ್ಮನಿರುವಂತೆ ಸೂಚಿಸಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.ಐಟಿ, ಇಡಿ, ಸಿಬಿಐ, ಸಮ್ಮಿಶ್ರ ಸರ್ಕಾರದ ಗೊಂದಲ ಹೀಗೆ ಸಾಕಷ್ಟು ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳಿಂದ ಸಮಸ್ಯೆ ಎದುರಿಸುತ್ತಿರುವ ಡಿ.ಕೆ.ಶಿವಕುಮಾರ್ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಬಹುತೇಕ ಮೌನಕ್ಕೆ ಶರಣಾಗಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.Sign in to your account
Username or Email Address


Password

 Remember Me


