ಕೋಲಾರ: ವಿದ್ಯುತ್ ತಂತಿ ದುರಸ್ಥಿ ಕಾರ್ಯ ನಡೆಸುತ್ತಿದ್ದ ವೇಳೆ ಶಾಕ್ ಹೊಡೆದು ಗುತ್ತಿಗೆ ನೌಕರ ಕೆಲಕಾಲ ಕಂಬದಲ್ಲೇ ನೇತಾಡಿದ ಘಟನೆ ಕೋಲಾರದಲ್ಲಿ ನಡೆದಿದೆ.ಪಶ್ಚಿಮ ಬಂಗಾಳ ಮೂಲದ ಬೆಸ್ಕಾಂ ಗುತ್ತಿಗೆ ನೌಕರ ದೀಪಕ್ ಗಂಭೀರ ಗಾಯಗೊಂಡಿದ್ದಾನೆ. ಕೋಲಾರ ನಗರದ ಕೋಲಾರಮ್ಮ ದೇವಾಲಯ ಮುಂಭಾಗದಲ್ಲಿ ವಿದ್ಯುತ್ ತಂತಿ ದುರಸ್ಥಿ ಕಾರ್ಯ ನಡೆಯುತ್ತಿತ್ತು. ಈ ವೇಳೆ ವಿದ್ಯುತ್ ಕಂಬವೇರಿ ಕೆಲಸ ಮಾಡುತ್ತಿದ್ದ ದೀಪಕ್‍ಗೆ ಶಾಕ್ ಹೊಡೆದಿದೆ. ಇದರಿಂದ ನೌಕರ ಕೆಲಕಾಲ ಕಂಬದಲ್ಲೇ ನೇತಾಡಿದ ಪರಿಣಾಮ ಗಂಭೀರ ಗಾಯಗೊಂಡಿದ್ದಾನೆ.ಈ ವೇಳೆ ಇತರೆ ಐದಕ್ಕೂ ಹೆಚ್ಚು ಜನ ಬೆಸ್ಕಾಂ ನೌಕರರು ದುರಸ್ಥಿ ಕೆಲಸದಲ್ಲಿ ತೊಡಗಿದ್ದರು. ಆದರೆ ಅದೃಷ್ಟವಶಾತ್ ಅವರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಗಾಯಗೊಂಡ ನೌಕರನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.ಈ ಘಟನೆ ಸಂಬಂಧ ಕೋಲಾರ ನಗರ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


