ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಎರಡನೇ ಬಾರಿಗೆ ಪ್ರಧಾನಿ ಪಟ್ಟಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಉಚಿತ ಬಸ್ ಸೇವೆ ನೀಡಿ ಮೋದಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.ಇಂದು ಸಂಜೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಹೀಗಾಗಿ ಮಂಗಳೂರಿನ ಕಿನ್ನಿಗೋಳಿಯ ಮೋದಿ ಅಭಿಮಾನಿಗಳು ಸಾರ್ವಜನಿಕರಿಗೆ ಉಚಿತ ಬಸ್ಸಿನ ವ್ಯವಸ್ಥೆ ಮಾಡಿದ್ದಾರೆ. ಕಿನ್ನಿಗೋಳಿ, ಮೂಡಬಿದ್ರೆ ಹಾಗೂ ಮಂಗಳೂರು ನಗರಕ್ಕೆ ಆಗಮಿಸುವ ಬಸ್ಸನ್ನು ಉಚಿತವಾಗಿ ಓಡಿಸಲು ಬುಕ್ ಮಾಡಿದ್ದಾರೆ.ಈ ಬಸ್ಸಿನ ಹೊರಗಡೆ ‘ಉಚಿತ ಬಸ್ ವ್ಯವಸ್ಥೆ’ಯೆಂದು ಬೋರ್ಡ್ ಹಾಕಲಾಗಿದೆ. ಈ ಮೂಲಕ ಮೋದಿ ಅಧಿಕಾರ ಸ್ವೀಕಾರದ ಹೆಸರಲ್ಲಿ ಜನಸಾಮಾನ್ಯರಿಗೆ ಉಚಿತದ ಕೊಡುಗೆ ನೀಡುತ್ತಿರುವ ಅಭಿಮಾನಿಗಳ ಕಾರ್ಯಕ್ಕೆ ಸ್ಥಳೀಯರು ಹಾಗೂ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.Sign in to your account
Username or Email Address


Password

 Remember Me


