ಹುಬ್ಬಳ್ಳಿ: ಮಹಿಳೆಯರು ಹುಬ್ಬಳ್ಳಿಯ ಶಾ ಬಜಾರ್ ಮಾರುಕಟ್ಟೆಯಲ್ಲಿ ಪರಸ್ಪರ ಹೊಡೆದಾಡಿಕೊಂಡಿರುವ ವಿಡಿಯೋ ಸ್ಥಳೀಯರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಬುಧವಾರ ಸಂಜೆ ಮಹಿಳೆಯರು ಮಾರುಕಟ್ಟೆಗೆ ತಮ್ಮ ಗಂಡಂದಿರ ಜೊತೆ ಬಂದಿದ್ದರು. ಈ ವೇಳೆ ಓರ್ವ ಬೈಕ್ ತೆಗೆಯುವಾಗ ಮಹಿಳೆಗೆ ತಾಗಿದೆ. ಬೈಕ್ ತಾಗಿದ್ದರಿಂದ ಕುಪಿತಗೊಂಡ ಮಹಿಳೆ ಸವಾರನನ್ನು ನಿಂದಿಸಿದ್ದಾಳೆ. ಪತಿಯನ್ನು ನಿಂದಿಸುತ್ತಿದ್ದ ನೋಡಿದ ಸವಾರನ ಪತ್ನಿ ಮಹಿಳೆ ಮೇಲೆ ಎರಗಿದ್ದಾಳೆ.ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ಏರ್ಪಟ್ಟಿದ್ದು, ಕೊನೆಗೆ ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿದ್ದಾರೆ. ಕೊನೆಗೆ ಇಬ್ಬರು ಮಹಿಳೆಯರ ಗಂಡಂದಿರನ್ನು ತಮ್ಮ ಪತ್ನಿಯರನ್ನು ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.Sign in to your account
Username or Email Address


Password

 Remember Me


