ಬೆಂಗಳೂರು: ಕಾಂಗ್ರೆಸ್ ವಕ್ತಾರರು ಒಂದು ತಿಂಗಳ ಕಾಲಾವಧಿಯವರೆಗೂ ಯಾವುದೇ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳಿಗೆ ಹೋಗಬಾರದೆಂದು ಕಾಂಗ್ರೆಸ್ ನಿರ್ಬಂಧ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಪಕ್ಷದ ವಕ್ತಾರ ರಣ್‍ದೀಪ್ ಸಿಂಗ್ ಸುರ್ಜೆವಾಲಾ ತಿಳಿಸಿದ್ದಾರೆ.ಈ ಬಗ್ಗೆ ಸ್ವತಃ ರಣ್‍ದೀಪ್ ಸಿಂಗ್ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ. ಇನ್ನೂ ಒಂದು ತಿಂಗಳವರೆಗೂ ಯಾವುದೇ ಮಾಧ್ಯಮಗಳ ಚರ್ಚೆಗಳಿಗೆ ಕಾಂಗ್ರೆಸ್ ವಕ್ತಾರರು ಹೋಗಬಾರದು. ಹೀಗಾಗಿ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಪ್ರತಿನಿಧಿಗಳನ್ನು ಸೂಚಿಸದಂತೆ ಎಲ್ಲ ಮಾಧ್ಯಮ ಚಾನಲ್‍ಗಳು ಮತ್ತು ಸಂಪಾದಕರಿಗೆ ರಣ್‍ದೀಪ್ ಸುರ್ಜೇವಾಲಾ ಮನವಿ ಮಾಡಿಕೊಂಡಿದ್ದಾರೆ..@INCIndia has decided to not send spokespersons on television debates for a month. All media channels/editors are requested to not place Congress representatives on their shows.— Randeep Singh Surjewala (@rssurjewala) May 30, 2019ಇತ್ತೀಚೆಗಷ್ಟೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಗುರುತಿಸಿಕೊಂಡಿರುವ ಮಾಧ್ಯಮಗಳಿಗೆ ಜೆಡಿಎಸ್ ಕೂಡ ಬಹಿಷ್ಕಾರ ಹಾಕಿತ್ತು. ಇನ್ನು ಮುಂದೆ ಯಾರು ಪಕ್ಷದಿಂದ ಅಧಿಕೃತ ಆದೇಶ ಸಿಗುವವರೆಗೂ ಮಾಧ್ಯಮಗಳ ಚರ್ಚೆಗೆ ಹೋಗಬಾರದು, ಯಾವುದೇ ಮಾಹಿತಿಯನ್ನು ನೀಡಬಾರದು ಅಂತ ಜೆಡಿಎಸ್ ಅಧಿಕೃತ ಆದೇಶ ಹೊರಡಿಸಿತ್ತು.Sign in to your account
Username or Email Address


Password

 Remember Me


