ಮಂಡ್ಯ: ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ 67ನೇ ಹುಟ್ಟುಹಬ್ಬ. ಹೀಗಾಗಿ ಇದೇ ದಿನದಂದು ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರು ವಿಜಯೋತ್ಸವದ ಕಾರ್ಯಕ್ರಮ ನಡೆಸುತ್ತಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಭಿಮಾನಿಯೊಬ್ಬರು ಅಂಬಿ ಭಾವಚಿತ್ರವುಳ್ಳ ಬರೋಬ್ಬರಿ 750 ಗ್ರಾಂ ತೂಕ ಇರುವ ಚಿನ್ನದ ಹಾರ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.ಮಂಡ್ಯದ ಕೀಲಾರದ ರುದ್ರಗೌಡ ಅವರೇ ಈ ಚಿನ್ನದ ಅಭಿಮಾನಿ. ಕಳೆದ 35 ವರ್ಷದಿಂದ ಅಂಬರೀಶ್ ಅಭಿಮಾನಿಯಾಗಿರುವ ರುದ್ರೆಗೌಡರು, ಅಂಬರೀಶ್ ಭಾವಚಿತ್ರವುಳ್ಳ ಚಿನ್ನದ ಪದಕದ ಜೊತೆ ಬೃಹತ್ ಚಿನ್ನದ ಹಾರ ಹಾಕಿಕೊಂಡಿದ್ದಾರೆ. 7-8 ವರ್ಷಗಳಿಂದ ಅಭಿಮಾನಿ ಈ ಚಿನ್ನದ ಪದಕ ಇರುವ ಹಾರ ಮಾಡಿಸಿಕೊಂಡು, ಅದನ್ನು ಧರಿಸಿ ಅಭಿಮಾನ ಮೆರೆಯುತ್ತಿದ್ದಾರೆ.ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು 35 ವರ್ಷದಿಂದ ಅಣ್ಣನ ಅಭಿಮಾನಿ. ಅವರ ಚಿತ್ರ ಅವರ ಜೀವನ ನಮಗೆ ಪ್ರೇರಣೆ. ನಾವು ಯಾವಾಗಲೂ ಅವರ ಜೊತೆ ಇರುತ್ತಿದ್ದೇವು. ಇಂದು ಅವರು ನಮ್ಮ ಜೊತೆ ಇಲ್ಲ. ಈ ವಿಜಯೋತ್ಸವವನ್ನ ಅವರು ನೋಡಬೇಕಿತ್ತು ಎಂದರು.ಈ ಚಿನ್ನದ ಪದಕಕ್ಕೆ ಯಾವುದೇ ತೆರಿಗೆ ಸಮಸ್ಯೆ ಇಲ್ಲ. ಅಣ್ಣನ ಫೋಟೋ ಇದ್ದ ಮೇಲೆ ಸಮಸ್ಯೆ ಬರುವುದಿಲ್ಲ ಎಂದು ಹೇಳಿದರು.Sign in to your account
Username or Email Address


Password

 Remember Me


