ಮಂಡ್ಯ: ದಿವಂಗತ ನಟ ಅಂಬರೀಶ್ ಹುಟ್ಟು ಹಬ್ಬದ ಪ್ರಯುಕ್ತ ಅವರ ಹುಚ್ಚು ಅಭಿಮಾನಿಯೊಬ್ಬ ತನ್ನ ಕೈ ಮೇಲೆ ಅಂಬರೀಶ್ ನಟಿಸಿರುವ ಸಿನಿಮಾದ ಹೆಸರುಗಳನ್ನು ಹರಿತವಾದ ಲೋಹದಿಂದ ಬರೆದುಕೊಂಡಿದ್ದಾನೆ.ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬೇವಿನಕುಪ್ಪೆ ಗ್ರಾಮದ ಪ್ರಕಾಶ್ ಎಂಬವರೇ ಈ ರೀತಿಯ ಹುಚ್ಚು ಅಭಿಮಾನ ಪ್ರದರ್ಶಿಸಿದ್ದಾರೆ. ಪ್ರಕಾಶ್ ತಮ್ಮ ಕೈ ಮೇಲೆ ಅಂಬರೀಶ್, ಸುಮಲತಾ ಹಾಗೂ ಅಭಿ ಎಂದು ಬರೆದುಕೊಂಡಿರುವುದಲ್ಲದೇ ಅಂಬರೀಶ್ ಅವರ ನಟನೆಯ ಚಿತ್ರಗಳ ಹೆಸರನ್ನು ಬರೆದುಕೊಂಡಿದ್ದಾರೆ.ಅಂಬರೀಶ್ ಬದುಕಿದ್ದಾಗ ಒಂದು ದಿನ ನಿಮ್ಮೂರಿಗೆ ಭೇಟಿ ನೀಡಿ ನಿಮ್ಮ ಮನೆಗೆ ಬರುವೆ ಎಂದು ಹೇಳಿದ್ದರಂತೆ. ಆದರೆ ಅಭಿಮಾನಿಯ ಆಸೆ ಈಡೇರಿಸುವ ಮೊದಲೇ ಅಂಬರೀಶ್ ಅವರು ಇಹಲೋಕ ತ್ಯಜಿಸಿದ್ದು, ಅವರ ಕುಟುಂಬದವರಾದರು ನಮ್ಮ ಮನೆಗೆ ಬರಬೇಕೆಂದು ಅಂಬಿ ಅಭಿಮಾನಿ ಪ್ರಕಾಶ್ ಒತ್ತಾಯಿಸುತ್ತಿದ್ದಾರೆ.Sign in to your account
Username or Email Address


Password

 Remember Me


