ಮೈಸೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬೀದಿ ಬದಿ ವ್ಯಾಪಾರಿಯೊಬ್ಬರು ಮಂಡ್ಯದ ಜನರಿಗೆ ವಿನೂತನ ರೀತಿಯ ಅಭಿನಂದನೆ ಸಲ್ಲಿಸುತ್ತಿದ್ದಾರೆ.ಮಂಡ್ಯದ ಜನರಿಗೆ ಮೈಸೂರಿನಲ್ಲಿ ಉಚಿತ ಊಟ ತಿಂಡಿ ನೀಡಲಾಗುತ್ತಿದೆ. ಗ್ರಾಹಕ ಮಂಡ್ಯ ಲೋಕಸಭಾ ಕ್ಷೇತ್ರದವರು ಎಂದು ಹೇಳಿದರೆ ಅವರಿಗೆ ಉಚಿತವಾಗಿ ಊಟ ತಿಂಡಿ ನೀಡಿ ಎಂದು ತನ್ನ ನೌಕರರಿಗೆ ಫಾಸ್ಟ್ ಫುಡ್ ಮಾಲೀಕ ರಘು ಸೂಚಿಸಿದ್ದಾರೆ.ಸುಮಲತಾ ಅಂಬರೀಶ್ ಅವರು ಗೆಲುವು ಸಾಧಿಸಿದ್ದಕ್ಕಾಗಿ ಮಂಡ್ಯ ಜನರ ಸ್ವಾಭಿಮಾನ ಹೆಚ್ಚಾಗಿದೆ. ಗೆಲುವಿಗಿಂತ ಸ್ವಾಭಿಮಾನ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜನರ ಬಳಿ ಹಣ ಪಡೆಯದೇ ಉಚಿತವಾಗಿ ಕ್ಯಾಂಟಿನ್ ಆಹಾರ ನೀಡುತ್ತಿದ್ದೇನೆ ಎಂದು ಕ್ಯಾಂಟೀನ್ ಮಾಲೀಕ ರಘು ಹೇಳಿದ್ದಾರೆ.ಮಂಡ್ಯ ಉಚ್ಚಾಟಿತ ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ಆಹಾರ ಸೇವಿಸಲು ಹೋದಾಗ ಹಣ ಪಡೆಯಲಿಲ್ಲ. ರಘು ಅವರ ನಿರ್ಧಾರಕ್ಕೆ ಚಕಿತರಾದ ಸುಮಲತಾ ಆಪ್ತ ಸಚ್ಚಿದಾನಂದ ಅವರು ರಘು ಅವರಿಗೆ ಶುಭಕೋರಿದ್ದಾರೆ. ಶುಭಕೋರಿದ ನಂತರ ಸಚ್ಚಿದಾನಂದ ಮಂಡ್ಯ ಕಡೆಗೆ ಪ್ರಯಾಣ ಬೆಳೆಸಿದರು.Sign in to your account
Username or Email Address


Password

 Remember Me


