ಬೆಂಗಳೂರು: ಏರ್‌ಪೋರ್ಟ್ ರಸ್ತೆ ಮೃತ್ಯುಕೂಪವಾಗ್ತಿದೆಯಾ ಎನ್ನುವ ಅನುಮಾನ ಕಾಡುತ್ತಿದೆ. ಏಕೆಂದರೆ ಸೋಮವಾರವಷ್ಟೇ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದರು. ಇಂದು ಪುನಃ ಯಲಹಂಕದ ಬಳಿ ಭೀಕರ ಅಪಘಾತ ಸಂಭವಿಸಿದೆ.ಸ್ಲೋ ಮೂವಿಂಗ್ ಕಂಟೇನರ್ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿದೆ. ಘಟನೆಯಲ್ಲಿ ಡ್ರೈವರ್ ಸೇರಿದಂತೆ 13 ಮಂದಿ ಗಾಯಗೊಂಡಿದ್ದಾರೆ. ಆಂಧ್ರದ ಅನಂತಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಇದಾಗಿದ್ದು 30ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು.ಡ್ರೈವರ್ ನಂದನ್ ಎರಡು ಕಾಲು ಮುರಿದಿದ್ದು, ಕೊಡಿಗೇಹಳ್ಳಿ ಗೇಟ್ ಸಮೀಪದ ಕಾವೇರಿ ಎಸ್ಟರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಸೋಮವಾರ ಅಂಬುಲೆನ್ಸ್ ಚಾಲಕನ ಬೇಜವಾಬ್ದಾರಿತನದಿಂದ ಅಪಘಾತ ನಡೆದಿತ್ತು ಎಂಬುದು ತಿಳಿದು ಬಂದಿದೆ. ಅಂಬುಲೆನ್ಸ್ ಚಾಲಕ ವೇಗವಾಗಿ ವಾಹನ ಚಲಾಯಿಸಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿದೆ. ಬಳಿಕ ಡಿವೈಡರ್ ನಿಂದ ಹಾರಿ ಮುಂದೆ ಬರುತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು.Sign in to your account
Username or Email Address


Password

 Remember Me


