ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಿಥುನ್ ರೈಗೆ ಬಹಿರಂಗ ಜೀವ ಬೆದರಿಕೆ ಹಾಕಿದ ಘಟನೆ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.ಮೇ 23ರ ಮತ ಎಣಿಕೆಯ ದಿನದಂದು ಸಂಜೆ ಮಂಗಳೂರು ಹೊರವಲಯದ ಪೊಳಲಿ ಸಮೀಪದ ಬಡಕಬೈಲ್ ಎಂಬಲ್ಲಿ ನಡುರಸ್ತೆಯಲ್ಲೇ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ನಡೆದಿತ್ತು. ಈ ವೇಳೆ, ಮಿಥುನ್ ರೈ ವಿರುದ್ಧ ಘೋಷಣೆ ಹಾಕುತ್ತಾ ಬಜರಂಗದಳದ ಸುದ್ದಿಗೆ ಬಂದಲ್ಲಿ ಕೈ, ಕಾಲು ಕಡಿಯುತ್ತೇವೆ. ಅಗತ್ಯ ಬಿದ್ದರೆ ತಲೆಯನ್ನೂ ತೆಗೆಯುತ್ತೇವೆ ಎಂದು ಘೋಷಣೆ ಹಾಕಿದ್ದಾರೆ.ನಡುಬೀದಿಯಲ್ಲಿ ಹೀಗೆ ಘೋಷಣೆ ಹಾಕಿದ್ದನ್ನು ಸಾರ್ವಜನಿಕರು ವಿಡಿಯೋ ಮಾಡಿದ್ದು ಈಗ ವೈರಲ್ ಆಗಿದೆ. ಈ ಹಿಂದೆ ಚುನಾವಣೆ ಸಂದರ್ಭ ಮಿಥುನ್ ರೈ ಭಾಷಣ ಮಾಡುತ್ತಾ ತಾನು ಗೆದ್ದು ಬಂದಲ್ಲಿ ಬಜರಂಗದಳದ ಹುಟ್ಟಡಗಿಸುತ್ತೇನೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳ ಸಂಘಟನೆಯನ್ನು ನಿಷೇಧಿಸುತ್ತೇವೆಂದು ಹೇಳಿದ್ದರು.ಈ ವಿಚಾರ ಹಿಂದೂ ಸಂಘಟನೆಗಳ ಆಕ್ಷೇಪಕ್ಕೆ ಕಾರಣವಾಗಿತ್ತು. ಇದೀಗ ಮಿಥುನ್ ರೈ ಹೀನಾಯವಾಗಿ ಸೋತ ಬಳಿಕ ಬಜರಂಗದಳದ ಕಾರ್ಯಕರ್ತರು ಬಿಜೆಪಿ ವಿಜಯೋತ್ಸವ ನೆಪದಲ್ಲಿ ಬೆದರಿಕೆ ಹಾಕಿದ್ದು ಸಹಜವಾಗೇ ಮತ್ತೊಂದು ರಾಜಕೀಯ ವೈರತ್ವಕ್ಕೆ ಕಾರಣವಾಗಿದೆ.Sign in to your account
Username or Email Address


Password

 Remember Me


