ಬೆಂಗಳೂರು: ಸ್ಯಾಂಡಲ್‍ವುಡ್‍ನ ದೊಡ್ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದ್ದು, ರಾಜ್ ಕುಟುಂಬದ ಮೂರನೇ ತಲೆಮಾರು ಯುವರಾಜ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ರಾಜ್ ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್ ಕುಮಾರ್ ಎರಡನೇ ಪುತ್ರ ಯುವರಾಜ್ ಕುಮಾರ್ ಅವರು ಮೈಸೂರಿನ ಹುಡುಗಿ ಶ್ರೀದೇವಿಯನ್ನ ವರಿಸಿದ್ದಾರೆ. ಇವರಿಬ್ಬರ ಮದುವೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದೆ. ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಇಬ್ಬರು ಸ್ನೇಹಿತರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಎರಡು ಕುಟುಂಬದವರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ.ಯುವರಾಜ್ ಮದುವೆಗೆ ಕುಟುಂಬಸ್ಥರು ಮತ್ತು ಚಿತ್ರರಂಗದ ಆತ್ಮೀಯರಿಗಷ್ಟೇ ಆಹ್ವಾನಿಸಲಾಗಿತ್ತು. ನಟಿ ಅಮೂಲ್ಯ ಜಗದೀಶ್, ಹಿರಿಯ ನಟಿಯರಾದ ಜಯಂತಿ, ಹೇಮಾ ಚೌದ್ರಿ, ಮಾಳವಿಕ ಅವಿನಾಶ್, ಎಸ್ ನಾರಾಯಣ, ಬಿಸಿ ಪಾಟೀಲ್, ಸೇರಿದಂತೆ ಕೆಲ ಕಲಾವಿದರು ವಧು ವರರಿಗೆ ಶುಭ ಕೋರಿದ್ದಾರೆ.ಮದುವೆ ವಿಶೇಷ ಅಂದರೆ ಯುವರಾಜ್ ಕುಮಾರ್ ದೊಡ್ಡಪ್ಪ ಶಿವರಾಜ್ ಕುಮಾರ್, ಚಿಕ್ಕಪ್ಪ ಪುನೀತ್ ರಾಜ್‍ಕುಮಾರ್ ಹಾಗೂ ಸ್ನೇಹಿತರೆಲ್ಲಾ ಒಂದೇ ರೀತಿಯ ಡ್ರೆಸ್ ಕೋಡ್‍ನಲ್ಲಿ ಮಿಂಚಿದ್ದರು. ಇನ್ನು ಇಂದು ಸಂಜೆ 7 ಗಂಟೆಗೆ ಅರಮನೆ ಮೈದಾನದಲ್ಲಿ ಯುವರಾಜ್ ಹಾಗೂ ಶ್ರೀದೇವಿಯ ಆರತಕ್ಷತೆ ಕಾರ್ಯಕ್ರಮ ನಡೆಯುತ್ತಿದೆ. ಈ ರಿಸೆಪ್ಷನ್ ಗೆ ಚಿತ್ರರಂಗದ ಗಣ್ಯರು ಆಗಮಿಸಲಿದ್ದಾರೆ.Sign in to your account
Username or Email Address


Password

 Remember Me


