ಮಂಗಳೂರು: ದೆಹಲಿಯ ಗುರುಗ್ರಾಮ್‍ನಲ್ಲಿ ಐಸ್ ಸ್ಕೇಟಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಿದ ಸ್ಪೀಡ್ ಸ್ಕೇಟಿಂಗ್ ಓಪನ್ ಚಾಲೆಂಜ್ 2019 ಚಾಂಪಿಯನ್ ಶಿಪ್ ನಲ್ಲಿ ಮಂಗಳೂರಿನ ಅನಘಾ ಚಿನ್ನದ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.8 ರಿಂದ 10 ವರ್ಷದೊಳಗಿನ ಬಾಲಕಿಯರ ವಿಭಾಗದ 500 ಮೀಟರ್ ಐಸ್ ರಿಂಕ್ ರೇಸ್‍ನಲ್ಲಿ ಅನಘಾ ಚಿನ್ನದ ಪದಕ ಗಳಿಸಿದ್ದಾರೆ. ಮಂಗಳೂರಿನ ಡಾ.ರಾಜೇಶ್ ಹುಕ್ಕೇರಿ ಹಾಗೂ ಡಾ.ಅನಿತಾ ರಾಜೇಶ್ ದಂಪತಿಯ ಪುತ್ರಿಯಾದ ಅನಘಾ ಬಿಜೈ ಲೂಡ್ರ್ಸ್ ಸಿಬಿಎಸ್‍ಇ ಶಾಲೆಯ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.ಐಸ್ ಸ್ಕೇಟಿಂಗ್ ರಾಷ್ಟ್ರೀಯ ತರಬೇತುದಾರ ಅವಧೂತ್ ಥಾವಡೆ ಅವರಿಂದ ಅನಘಾ ಐಸ್ ಸ್ಕೇಟಿಂಗ್ ತರಬೇತಿ ಪಡೆದಿದ್ದಾಳೆ. ಸದ್ಯ ಮಂಗಳೂರಿನ ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‍ನ ಸದಸ್ಯರಾಗಿರುವ ಅನಘಾ ತರಬೇತುದಾರರಾದ ಮೋಹನ್ ದಾಸ್.ಕೆ ಹಾಗೂ ಜಯರಾಜ್ ಅವರಿಂದ ಸ್ಕೇಟಿಂಗ್ ತರಬೇತಿಯನ್ನು ಪಡೆಯುತ್ತಿದ್ದಾಳೆ.Sign in to your account
Username or Email Address


Password

 Remember Me


