ಕಲಬುರಗಿ: ಚಿಂಚೋಳಿ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅವಿನಾಶ್ ಜಾಧವ್ ಅವರಿಗೆ ಲಿಂಗಾಯತರು ಮತ ಹಾಕಿಲ್ಲ ಎಂದು ಬಾಬುರಾವ್ ಚಿಂಚನಸೂರ್ ಅವರು ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತರು ಉಮೇಶ್ ಜಾಧವ್ ಅವರಿಗೆ 14 ಸಾವಿರ ಲೀಡ್ ಕೊಟ್ಟಿದ್ದರು. ಆದರೆ ಚಿಂಚೋಳಿ ಉಪ ಚುನಾವಣೆಯಲ್ಲಿ ಏಳು ಸಾವಿರ ಮತಗಳ ಲೀಡ್ ಮಾತ್ರ ಅವಿನಾಶ್ ಅವರಿಗೆ ಬಂದಿದೆ. ಕಬ್ಬಲಿಗರು ಮತ್ತು ಬಂಜಾರ ಸಮುದಾಯದ ಮತಗಳಿಂದ ಮಾತ್ರ ಅವಿನಾಶ್ ಗೆದ್ದಿದ್ದಾರೆ. ಲಿಂಗಾಯತರು ಯಾರು ಕೂಡ ಬಿಜೆಪಿಗೆ ಮತ ಹಾಕಿಲ್ಲ ಬೆಂಬಲಿಗರ ಸಭೆಯಲ್ಲಿ ಚಿಂಚನಸೂರ್ ಹೇಳಿಕೆ ನೀಡಿದ್ದಾರೆ.ಚುನಾವಣೆ ಫಲಿತಾಂಶದ ಬಳಿಕ ಬಾಬುರಾವ್ ಚಿಂಚನಸೂರ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಚಿಂಚನಸೂರ್ ಹೇಳಿಕೆ ನೀಡಿದ್ದಾರೆ. ಲಿಂಗಾಯತರು ಖರ್ಗೆ ಅವರ ಬಳಿ ಹಣ ಪಡೆದು ಬುಕ್ ಆಗಿದ್ದಾರೆ. ಹಣ ಪಡೆದು ಕಾಂಗ್ರೆಸ್‍ಗೆ ಮತ ಹಾಕಿದ್ದಾರೆ. ಕಬ್ಬಲಿಗರು ಮಾತ್ರ 40 ಸಾವಿರ ಮತಗಳನ್ನು ಬಿಜೆಪಿಗೆ ಹಾಕಿದ್ದಾರೆ ಎಂದು ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.Sign in to your account
Username or Email Address


Password

 Remember Me


