ದಾವಣಗೆರೆ: ಎಣ್ಣೆ ಮತ್ತಿನಲ್ಲಿ ಯುವತಿಯೊಬ್ಬಳು ಬಾರ್ ಮುಂದೆ ರಂಪಾಟ ಮಾಡಿರುವ ಘಟನೆ ದಾವಣಗೆರೆಯ ಹದಡಿ ರಸ್ತೆಯಲ್ಲಿರುವ ಬಾರ್‌ವೊಂದರಲ್ಲಿ ನಡೆದಿದೆ.ಬಾರ್‌ವೊಂದರಲ್ಲಿ ಮುಂಭಾಗ ಬಂದು ಯುವತಿ ಎಣ್ಣೆ ನಶೆಯಲ್ಲಿ ಗ್ರಾಹಕರಿಗೆ ತೊಂದರೆ ಕೊಟ್ಟಿದ್ದಾಳೆ. ಅಷ್ಟೇ ಅಲ್ಲದೇ ಅಲ್ಲಿದ್ದವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಗಲಾಟೆ ಮಾಡಿದ್ದಾಳೆ. ಬಾರ್ ಮುಂಭಾಗವೇ ನೆಲದ ಮೇಲೆ ಕುಳಿತು, ಮಲಗಿ ಒದ್ದಾಡಿದ್ದಾಳೆ.ಕೊನೆಗೆ ಯುವತಿಯ ಕಾಟಕ್ಕೆ ರೋಸಿ ಹೋದ ಗ್ರಾಹಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬರುಷ್ಟರಲ್ಲಿ ಯುವತಿಗೆ ಮೇಲೆ ನೀರು ಸುರಿದು ಎಣ್ಣೆ ನಶೆ ಇಳಿಸಲು ಪ್ರಯತ್ನ ಮಾಡಿದ್ದಾರೆ. ಇತ್ತ ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸರಿಗೂ ಯುವತಿ ಅವಾಜ್ ಹಾಕಿದ್ದಾಳೆ.ಸ್ವಲ್ಪ ಸಮಯದವರೆಗೂ ರಸ್ತೆಯಲ್ಲಿಯೇ ಯುವತಿ ರಂಪಾಟ ಮಾಡಿದ್ದಾಳೆ. ನಂತರ ಪೊಲೀಸರು ಯುವತಿಯನ್ನು ಸಮಾಧಾನ ಮಾಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯುವತಿಯ ಯಾರೆಂದು ಇನ್ನೂ ಪತ್ತೆಯಾಗಿಲ್ಲ.Sign in to your account
Username or Email Address


Password

 Remember Me


