ಬೆಂಗಳೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಾವನೊಬ್ಬ ತನ್ನ ಸೊಸೆಯನ್ನೇ ಲೈಂಗಿಕ ಕ್ರಿಯೆಗೆ ಕರೆದ ಘಟನೆ ಬೆಂಗಳೂರಿನ ಕೊಣನಕುಂಟೆಯಲ್ಲಿ ನಡೆದಿದೆ.ಪಳನಿ ಸೊಸೆಯನ್ನೇ ಲೈಂಗಿಕ ಕ್ರಿಯೆಗೆ ಕರೆದ ಮಾವ. ಪಳನಿ ತನ್ನ ಸೊಸೆ ಅನಿತಾ (ಹೆಸರು ಬದಲಾಯಿಸಲಾಗಿದೆ)ಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. 2014ರಲ್ಲಿ ಅನಿತಾ ಮ್ಯಾಟ್ರಿಮೋನಿಯ ಮುಂಖಾತರ ಕುಮಾರ್‍ನನ್ನು ಮದುವೆಯಾಗಿದ್ದರು.ಪಳನಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಸೊಸೆ ಅನಿತಾಗೆ ಲೈಂಗಿಕ ಕ್ರಿಯೆಗೆ ಕರೆಯುತ್ತಿದ್ದನು. ಈ ವಿಷಯ ತಿಳಿದ ಕುಮಾರ್ ತನ್ನ ತಂದೆಯಿಂದ ದೂರವಿರಲು ಬೇರೆ ಮನೆ ಮಾಡಿದ್ದರು. ಬಳಿಕ ಪಳನಿ ಹಾಗೂ ಆತನ ಪತ್ನಿ ಸರಸ್ವತಿ ಬಂದು ಅನಿತಾ ಮೇಲೆ ಹಲ್ಲೆ ನಡೆಸಿದ್ದರು.ಪಳನಿ ಹಾಗೂ ಸರಸ್ವತಿ ಗುರುವಾರ ಅನಿತಾ ನಿವಾಸದ ಬಳಿ ಗಲಾಟೆ ಮಾಡಿ ಆಕೆಯ ಬಟ್ಟೆ ಎಳೆದಾಡಿ ಹಲ್ಲೆ ಮಾಡಿದ್ದಾರೆ. ಮನೆಯ ಬಳಿ ಬಂದು ಗಲಾಟೆ ಮಾಡಿ ಹೋಗಿದ್ದಕ್ಕೆ ಅನಿತಾ ತನ್ನ ಅತ್ತೆ-ಮಾವನ ವಿರುದ್ಧ ಕೇಸ್ ದಾಖಲಿಸಿದ್ದಾರೆ.ಈ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


