ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಪರೂಪದ ಬಿಳಿ ಬಣ್ಣದ ನಾಗರಹಾವು ಪ್ರತ್ಯಕ್ಷವಾಗಿದೆ.ನ್ಯಾಯಂಗ ಬಡಾವಣೆಯ ಬಳಿ ಬಿಳಿ ಬಣ್ಣದ ನಾಗರಹಾವು ಕಾಣಿಸಿಕೊಂಡಿದೆ. ಬಿಳಿ ಬಣ್ಣದ ನಾಗರಹಾವು ಕಾಣಸಿಗುವುದು ತೀರಾ ಅಪರೂಪವಾಗಿದೆ. ಆದರೆ ಬಡಾವಣೆಯ ಖಾಲಿ ಸೈಟ್‍ವೊಂದರಲ್ಲಿ ಬಿಳಿ ನಾಗರಹಾವು ಕಾಣಿಸಿಕೊಂಡಿದೆ.ಬಿಳಿ ನಾಗರಹಾವನ್ನು ನೋಡಿದ ಜನರು ತಕ್ಷಣ ಉರಗ ತಜ್ಞ ಮೋಹನ್ ಅವರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ವಿಚಾರ ತಿಳಿದು ಮೋಹನ್ ಬಂದು ಹಾವನ್ನು ರಕ್ಷಣೆ ಮಾಡಿದ್ದಾರೆ. ನಾಗರ ಹಾವು ಸಂಪೂರ್ಣ ಬಿಳಿ ಬಣ್ಣದಿಂದ ಕೂಡಿದ್ದು, ಅಪರೂಪದ ಹಾವನ್ನು ನೋಡಲು ಅನೇಕ ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು.ಮೋಹನ್ ಅವರು ಹಾವನ್ನು ರಕ್ಷಣೆ ಮಾಡುವಾಗ ಅಲ್ಲಿದ್ದವರು ಅದನ್ನು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.Sign in to your account
Username or Email Address


Password

 Remember Me


