ಬೆಳಗಾವಿ: ನೂತನ ಸಂಸದರಾಗಿ ಆಯ್ಕೆಯಾದ ಡಾ.ಉಮೇಶ್ ಜಾಧವ್ ಅವರನ್ನು ಕಾಂಗ್ರೆಸ್ ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ಭೇಟಿಯಾಗಿ ಶುಭಾಶಯ ಕೋರಿದ್ದಾರೆ.ಕಳೆದ ರಾತ್ರಿ ಖಾಸಗಿ ಹೋಟೆಲ್ ಒಂದರಲ್ಲಿ ಆಪರೇಷನ್ ಕಮಲದ ಎ ಟೀಮ್ ಡಾ.ಉಮೇಶ್ ಜಾಧವ್ ಅವರನ್ನು ಭೇಟಿಯಾಗಿತ್ತು. ಕಾಂಗ್ರೆಸ್‍ನ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್, ಸಿಪಿ ಯೋಗೇಶ್ವರ್, ಮಾಲಿಕಯ್ಯ ಗುತ್ತೆದಾರ ಮತ್ತು ಯಡಿಯೂರಪ್ಪ ಪಿಎ ಸಂತೋಷ್ ಎಲ್ಲರೂ ಒಂದೇ ಕಡೆ ಸೇರಿ ಭಾಗಿಯಾಗಿದ್ದರು.ರಾತ್ರಿ ಡಿನ್ನರ್ ನೆಪದಲ್ಲಿ ಎರಡು ಗಂಟೆಗಳ ಕಾಲ ಮುಖಂಡರು ಮಾತುಕತೆ ನಡೆಸಿದ್ದಾರೆ. ರಾಜೀನಾಮೆ ನೀಡುವುದು ಸೇರಿದಂತೆ ಸರ್ಕಾರ ರಚನೆ ಕುರಿತು ಕೂಡ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಇಂದು ಸಂಜೆ ಗೋವಾ ತೆರಳುವುದಕ್ಕೆ ಅತೃಪ್ತ ಹಾಗೂ ರಮೇಶ್ ಟೀಮ್ ಪ್ಲಾನ್ ಮಾಡಿದೆ ಎಂದು ತಿಳಿದು ಬಂದಿದೆ.ಒಂದು ವೇಳೆ ಎಲ್ಲಾ ಅತೃಪ್ತ ಶಾಸಕರು ಸಂಪರ್ಕಕ್ಕೆ ಸಿಕ್ಕಿದ್ದೇ ಆದರೆ ಇಂದೇ ಗೋವಾಕ್ಕೆ ಶಿಫ್ಟ್ ಆಗಲು ಪ್ಲಾನ್ ಮಾಡಿದ್ದಾರೆ. ಈಗಾಗಲೇ ಗೋವಾದ ಫೋರ್ಟ್ ಅಗುಡಾದಲ್ಲಿರುವ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಸುಮಾರು 30 ರೂಮ್ ಗಳು ಬುಕ್ ಆಗಿವೆ. ಅತೃಪ್ತರು ಕಾಲಾವಕಾಶ ಕೇಳಿದರೆ ಕೇಂದ್ರದಲ್ಲಿ ಸರ್ಕಾರ ರಚನೆವರೆಗೂ ಸುಮ್ಮನಿರಲು ತೀರ್ಮಾನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.Sign in to your account
Username or Email Address


Password

 Remember Me


