ಮೈಸೂರು: ಪ್ರೇಮಿಗಳ ರಾಸಲೀಲೆ ವಿಡಿಯೋವೊಂದು ಫೇಸ್‍ಬುಕ್ ನಲ್ಲಿ ಅಪ್ಲೋಡ್ ಆದ ಪರಿಣಾಮ ವೀಡಿಯೋದಲ್ಲಿರುವ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡಿನ ಮಲ್ಲುಪುರ ಗ್ರಾಮದಲ್ಲಿ ನಡೆದಿದೆ.ಮಲ್ಲುಪುರ ಗ್ರಾಮದ ಯುವಕ ಅವಮಾನಕ್ಕೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಶಂಕಿಸಲಾಗಿದೆ. ಯುವಕ ಟಿವಿಎಸ್ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದು, ಅತಿಯಾಗಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.ಮೃತ ಯುವಕ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದನು. ಪ್ರೇಮಿಗಳು ತಮ್ಮ ರಾಸಲೀಲೆಯನ್ನ ಮೊಬೈಲ್‍ನಲ್ಲಿ ಸೆಲ್ಫಿ ಮಾಡಿಕೊಂಡಿದ್ದರು. ಇದೀಗ ಆ ರಾಸಲೀಲೆ ವಿಡಿಯೋ ಜೊತೆಗೆ ಬೆತ್ತಲಾಗಿ ತೆಗೆದ ಸೆಲ್ಫಿ ವೀಡಿಯೋಗಳು ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಲಾಗಿದ್ದು. ವೈರಲ್ ಆಗುತ್ತಿತ್ತು.ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಯುವಕ ಮಾತ್ರೆ ಸೇವಿಸಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾದೇ ಆತ ಮೃತಪಟ್ಟಿದ್ದಾನೆ. ಆದರೆ ಮಗ ಹೊಟ್ಟೆ ನೋವಿನಿಂದ ಬಳಲುತ್ತಿದ್ದನು. ಈ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಹೇಳುತ್ತಿದ್ದಾರೆ. ಯುವಕನ ಸಾವಿನ ನಂತರ ಗ್ರಾಮದಿಂದ ಯುವತಿ ಪರಾರಿಯಾಗಿದ್ದು, ಅನುಮಾನವನ್ನುಂಟು ಮಾಡಿದೆ.ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


