ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಪರಾಧಗಳು ಹೆಚ್ಚಾಗುತ್ತಿದ್ದು, ಇದೀಗ ರೌಡಿಶೀಟರ್ ನನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಯಶವಂತಪುರದ ಮಜಿದ್ ಬಳಿ ನಡೆದಿದೆ.ವಿಜಯ್ ಅಲಿಯಾಸ್ ವಿಜಿ ಕೊಲೆಯಾದ ರೌಡಿಶೀಟರ್. ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೃತ ವಿಜಿ ಗೆಳೆಯರೊಂದಿಗೆ ಕಾರಿನಲ್ಲಿ ಊಟಕ್ಕೆಂದು ಬಂದಿದ್ದನು. ಈ ವೇಳೆ ಜೊತೆಗಿದ್ದವರೊಂದಿಗೆ ಜಗಳ ಮಾಡಿಕೊಂಡಿದ್ದಾನೆ. ಆಗ ಗೆಳೆಯರು ತಮ್ಮ ಬಳಿ ಇದ್ದ ಮಾರಕಾಸ್ತ್ರದಿಂದ ವಿಜಿ ಮೇಲೆ ಹಲ್ಲೆ ಮಾಡಿದ್ದಾರೆ. ಪರಿಣಾಮ ವಿಜಿ ಕುಳಿತಲ್ಲಿಯೇ ಮೃತಪಟ್ಟಿದ್ದಾನೆ.ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಡಿಸಿಪಿ ಶಶಿಕುಮಾರ್ ಹಾಗೂ ಯಶವಂತಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವಿಜಿಯ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಇತ್ತು.ರೌಡಿಶೀಟರ್ ವಿಜಿ ಅಲಿಯಾಸ್ ವಿಜಯ್ ಕೊಲೆ ಆಗಿದೆ. ಯಶವಂತಪುರ ಬಳಿಯ ಆರ್‌ಟಿಓಯ ಜಾಮೀಯ ಮಸೀದಿ ಬಳಿ ಬೆಳಗ್ಗಿನ ಜಾವ 3.30ಕ್ಕೆ ಕೊಲೆಯಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಕಾರಿನಲ್ಲಿ ಬಂದು ಏಕಾಏಕಿ ಅಟ್ಯಾಕ್ ಮಾಡಿ ಎದೆಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ. ವಿಜಿ ರಸ್ತೆ ಬದಿಯೇ ಕುಳಿತು ಮೃತಪಟ್ಟಿದ್ದಾನೆ. ಸದ್ಯಕ್ಕೆ ಯಾರು ಮಾಡಿದ್ದಾರೆ ಎಂಬ ಸುಳಿವಿದೆ. ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿ ಇದೆ. ಹೀಗಾಗಿ ಸಿಸಿಟಿವಿ ಪರಿಶೀಲಿಸಿ ಶೀಘ್ರವೇ ಆರೋಪಿಯನ್ನ ಬಂಧಿಸುತ್ತೀವಿ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಹೇಳಿದ್ದಾರೆ.Sign in to your account
Username or Email Address


Password

 Remember Me


