ಬೆಂಗಳೂರು: ರಮ್ಯಾ ಎಲ್ಲಿದ್ದೀಯಮ್ಮ, ಎಲ್ಲಿ ನಿಮ್ಮ ಅಧ್ಯಕ್ಷ ರಾಹುಲ್ ಎಂದು ಟ್ವೀಟ್ ಮಾಡುವ ಮೂಲಕ ಕರ್ನಾಟಕ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಶಿಲ್ಪ ಗಣೇಶ್ ಅವರು ರಮ್ಯಾ ಅವರನ್ನು ಕಾಲೆಳೆದಿದ್ದಾರೆ.ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ತಂಡದ ಮುಖ್ಯಸ್ಥೆ ರಮ್ಯಾ ಮೋದಿ ಅವರ ವಿರುದ್ಧ ಟ್ವೀಟ್ ಮಾಡುವುದು ವ್ಯಂಗ್ಯವಾಡುತ್ತಿದ್ದ ಹಿನ್ನೆಲೆಯಲ್ಲಿ ಶಿಲ್ಪ ಗಣೇಶ್ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ.ರಮ್ಯಾ ಎಲ್ಲಿದಿಯಮ್ಮಾ? ಎಲ್ಲಿ ನಿಮ್ಮ ಅದ್ಯಕ್ಷ ರಾಹುಲ್? ಎಲ್ಲಿ ನಿಮ್ಮ ಫೇಕ್ ಅಕೌಂಟ್ ಸೈನ್ಯ? ಎಲ್ಲಿ ನಿಮ್ಮ ತಲೆಬುಡವಿಲ್ಲದ ಟ್ವೀಟ್ಗಳು? ಎಲ್ಲೋಯ್ತು ನಿಮ್ಮ ಆಧಾರವಿಲ್ಲದ ಆರೋಪಗಳು? ಅದಕ್ಕೆ ಹೇಳೋದು ಇನ್ನೊಬ್ಬರ ಬಗ್ಗೆ ಆಪಾದನೆ ಮಾಡೋ ಮೊದಲು ತಮ್ಮ ಬಗ್ಗೆ ತಮಗೆ ತಿಳಿದಿರಬೇಕು…..????‍♀️ pic.twitter.com/428S861eLK— Shilpa Ganesh (@ShilpaaGanesh) May 23, 2019ಗುರುವಾರ ಫಲಿತಾಂಶ ಪ್ರಕಟವಾಗಿ ಬಿಜೆಪಿ ಬಹುಮತ ಪಡೆದ ತಕ್ಷಣವೇ ಟ್ವೀಟ್ ಮಾಡಿರುವ ಶಿಲ್ಪ ” ರಮ್ಯಾ ಎಲ್ಲಿದ್ದೀಯಮ್ಮ? ಎಲ್ಲಿ ನಿಮ್ಮ ಅಧ್ಯಕ್ಷ ರಾಹುಲ್? ಎಲ್ಲಿ ನಿಮ್ಮ ಫೇಕ್ ಅಕೌಂಟ್ ಸೈನ್ಯ? ಎಲ್ಲಿ ನಿಮ್ಮ ತಲೆಬುಡವಿಲ್ಲದ ಟ್ವೀಟ್ ಗಳು? ಎಲ್ಲೋಯ್ತು ನಿಮ್ಮ ಆಧಾರವಿಲ್ಲದ ಆರೋಪಗಳು? ಅದಕ್ಕೆ ಹೇಳೋದು ಇನ್ನೊಬ್ಬರ ಬಗ್ಗೆ ಆಪಾದನೆ ಮಾಡೋ ಮೊದಲು ತಮ್ಮ ಬಗ್ಗೆ ತಮಗೆ ತಿಳಿದಿರಬೇಕು” ಎಂದು ಬರೆದು ಕಾಲೆಳೆದಿದ್ದಾರೆ.What are your thoughts? pic.twitter.com/b8GcgKL2ih— Ramya/Divya Spandana (@divyaspandana) April 29, 2019ಈ ಹಿಂದೆ ಟ್ವೀಟ್ ಮಾಡಿದ್ದ ರಮ್ಯಾ ಅವರು, ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳೊಂದಿಗೆ ಇರುವ ಪೋಟೋವನ್ನು ಹಾಕಿ. ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಮೋದಿಯನ್ನು ಹಿಟ್ಲರ್ ಹೋಲಿಕೆ ಮಾಡಿ ನೆಟ್ಟಿಗರ ಆಕ್ರೋಶಕ್ಕೆ ಕಾರಣ ವಾಗಿದ್ದರು. ಈ ಟ್ವೀಟ್‍ನಲ್ಲಿ ಹಿಟ್ಲರ್ ಅವರ ಫೋಟೋವನ್ನು ಪೋಟೋಶಾಪ್ ಮಾಡಲಾಗಿತ್ತು.Sign in to your account
Username or Email Address


Password

 Remember Me


