ಚಿಕ್ಕಮಗಳೂರು: ಭಜರಂಗಿ ಹಾಗೂ ಟಗರು ಸಿನಿಮಾ ಹಾಡಿಗೆ ಸಂಸದೆ ಶೋಭಾ ಕರಂದ್ಲಾಜೆ ಕುಣಿದು ಕುಪ್ಪಳಿಸಿದ್ದಾರೆ.ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಜಯ ಸಾಧಿಸಿದ ಶೋಭಾ ಕರಂದ್ಲಾಜೆ ಅವರು ಇಂದು ತರೀಕೆರೆಯ ರೋಡ್ ಶೋ ನಡಸಿದರು. ಈ ವೇಳೆ ಬಿಜೆಪಿ ಮಹಿಳಾ ಕಾರ್ಯಕರ್ತರ ಜೊತೆ ರಸ್ತೆ ಮಧ್ಯೆ ಭಜರಂಗಿ ಹಾಗೂ ಟಗರು ಸಿನಿಮಾಗಳ ಹಾಡಿಗೆ ಹೆಜ್ಜೆ ಹಾಕಿದರು.ಇದಕ್ಕೂ ಮುನ್ನ ಶೋಭಾ ಕರಂದ್ಲಾಜೆ ಅವರು ಶೃಂಗೇರಿಗೆ ಭೇಟಿ ನೀಡಿ, ಶಾರದೆಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಭಾರತೀ ತೀರ್ಥ ಸ್ವಾಮೀಜಿ ಆರ್ಶೀವಾದ ಪಡೆದರು.ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ವಿರುದ್ಧ 2,58,695 ಮತ ಅಂತರದಿಂದ ಭರ್ಜರಿ ಗೆಲುವು ಸಾಧಿಸಿ, ಎರಡನೇ ಬಾರಿ ಸಂಸತ್ ಪ್ರವೇಶಿಸಿದ್ದಾರೆ. ಶೋಭಾ ಕರಂದ್ಲಾಜೆ 5,32,504 ಮತಗಳನ್ನು ಪಡೆದರೆ, ಪ್ರಮೋದ್ ಮಧ್ವರಾಜ್ 2,73,809 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.ಶೋಭಾ ಗೆದ್ದಿದ್ದು ಹೇಗೆ?
ಸಂಸದೆ, ಹಿಂದುತ್ವದ ಕಮಿಟೆಡ್ ಕಾರ್ಯಕರ್ತೆ ಹಾಗೂ ಹಿಂದುತ್ವಕ್ಕೆ ಕಟಿಬದ್ಧ, ದತ್ತ ಜಯಂತಿಯಲ್ಲಿ ಪ್ರತಿ ವರ್ಷವೂ ಪಾಲ್ಗೊಂಡು ದತ್ತಪೀಠದ ಮುಕ್ತಿಗಾಗಿ ಹೋರಾಡಿದ್ದಾರೆ. ಶೋಭಾ ರಾಜ್ಯಮಟ್ಟದ ನಾಯಕಿ ಆಗಿದ್ದು, ಎಂತಹಾ ಸಂದರ್ಭದಲ್ಲೂ ಪಕ್ಷವನ್ನು ಸಮರ್ಥಿಸಿಕೊಳ್ಳುವ ಫೈರ್ ಬ್ರ್ಯಾಂಡ್ ಲೇಡಿ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಶೋಭಾ ಅವರು ಯಡಿಯೂರಪ್ಪನವರ ಆಪ್ತೆಯಾಗಿದ್ದು, ಜಿಲ್ಲೆಯ ಐದು ಶಾಸಕರಲ್ಲಿ ನಾಲ್ವರು ಬಿಎಸ್‍ವೈ ಬೆಂಬಲಿಗರಾಗಿದ್ದು, ಅವರೆಲ್ಲಾ ಶೋಭಾ ಬೆನ್ನಿಗೆ ನಿಂತಿದ್ದರು.ಶೋಭಾ ಜಾತಿಯಲ್ಲಿ ಒಕ್ಕಲಿಗರಾದದ್ದು ಪ್ಲಸ್ ಪಾಯಿಂಟ್ ಆಗಿದ್ದು, ಕಾಫಿನಾಡಿನ ಮಲೆನಾಡು ಭಾಗದಲ್ಲಿ ಒಕ್ಕಲಿಗರೇ ನಿರ್ಣಾಯಕರಾಗಿದ್ದರು.Sign in to your account
Username or Email Address


Password

 Remember Me


