ತುಮಕೂರು: ಮತ ಎಣಿಕೆಗೆ ಬಂದಿದ್ದ ಚುನಾವಣಾ ಸಿಬ್ಬಂದಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ.ಮೈಕ್ರೋ ಅಬ್ಸರ್ವರ್ ಆಗಿ ನೇಮಕವಾಗಿದ್ದ ಪ್ರಸಾದ್ (56) ಮೃತ ದುರ್ದೈವಿ. ತುಮಕೂರಿನ ಗುಮ್ಚಿ ವೃತ್ತದ ಬಳಿ ಘಟನೆ ನಡೆದಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.ಪ್ರಸಾದ್ ಅವರು ಮತ ಎಣಿಕೆ ಕಾರ್ಯ ಮುಗಿಸಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಗುಮ್ಚಿ ವೃತ್ತದ ಬಳಿ ಮಲಗಿದ್ದರು. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಸಾದ್ ಅವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಪ್ರಸಾದ್ ಸಾವನ್ನಪ್ಪಿದ್ದಾರೆ.ಪ್ರಸಾದ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.Sign in to your account
Username or Email Address


Password

 Remember Me


