ಮಂಡ್ಯ: ಇಂದು ಲೋಕಸಭಾ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಸ್ಪರ್ಧೆ ಮಾಡಿರುವ ಸುಮಲತಾ ಹೆಸರಿನ ಅಭ್ಯರ್ಥಿಗಳ ಏಜೆಂಟ್ ಪಾಸ್ ಗಳಿಗೆ ಫುಲ್ ಡಿಮ್ಯಾಂಡ್ ಆಗಿದೆ.ಲೋಕಸಭಾ ಚುನಾವಣಾ ಪ್ರಚಾರದ ವೇಳೆ, ಮತದಾನದ ದಿನ ಇಲ್ಲದ ಸುಮಲತಾಗಳ ಏಜೆಂಟ್ ಗಳು ಇಂದು ಎಣಿಕೆ ಸಂದರ್ಭದಲ್ಲಿ ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ಮೂವರು ಸುಮಲತಾಗಳು 19, 21, 22 ಕ್ರಮ ಸಂಖ್ಯೆಯಲ್ಲಿ ಅಭ್ಯರ್ಥಿ ಆಗಿದ್ದಾರೆ.ಇಂದು ಮಂಡ್ಯ ಲೋಕಸಭಾ ಚುನಾವಣಾ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಹೀಗಿರುವಾಗ ಎಣಿಕೆ ಕೇಂದ್ರ ಪ್ರವೇಶಿಸಲು ಸುಮಲತಾ ಹೆಸರಿನಲ್ಲಿ ಹಲವರು ಏಜೆಂಟ್ ಪಾಸ್ ಪಡೆದಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಈ ಪಾಸ್ ಪಡೆದಿದ್ದಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.ಬೆಂಬಲಿಗರು ಈ ಮೂವರು ಸುಮಲತಾ ಪರ ಚುನಾವಣಾ ಪ್ರಚಾರದ ವೇಳೆ, ಮತದಾನದ ಸಂದರ್ಭದಲ್ಲಿ ಎಲ್ಲೂ ಕಾಣಿಸಿರಲಿಲ್ಲ. ಆದರೆ ಇದೀಗ ಎಣಿಕೆ ಏಜೆಂಟ್ ಪಾಸ್ ಪಡೆದು ಪ್ರತ್ಯಕ್ಷರಾಗಿದ್ದಾರೆ ಸುಮಲತಾರ ಹೆಸರಲ್ಲಿ ಪಾಸ್ ಪಡೆದವರು ಜೆಡಿಎಸ್ ಕಾರ್ಯಕರ್ತರೇ ಎಂದು ಸುಮಲತಾ ಅಂಬರೀಶ್ ಬೆಂಬಲಿಗರು ಅನುಮಾನ ವ್ಯಕ್ತಪಡಿಸಿದ್ದಾರೆ.Sign in to your account
Username or Email Address


Password

 Remember Me


