ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಹಿಂದೆಂದೂ ಇಲ್ಲದ ನೀರಿನ ಸಮಸ್ಯೆ ಈ ಬಾರಿ ಎದುರಾಗಿದೆ. ನದಿಗಳೆಲ್ಲಾ ಬತ್ತಿದ್ದು, ಕೆರೆ ಬಾವಿಯ ನೀರು ಆವಿಯಾಗಿದೆ. ದೇವಸ್ಥಾನಗಳ ಪುಷ್ಕರಣಿಗಳು ಕೂಡ ನೀರಿಲ್ಲದೆ ಒಣಗುತ್ತಿದೆ.ಈ ಪರಿಸ್ಥಿತಿಯನ್ನು ಉಪಯೋಗಿಸಲು ಹೊರಟಿರುವ ದೇವಸ್ಥಾನದ ಆಡಳಿತ ಮಂಡಳಿ, ಕೆರೆಯ ಕೆಸರೆತ್ತುವ ಕೆಲಸ ಮಾಡುತ್ತಿದೆ. ಉಡುಪಿಯ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯ ಹೂಳೆತ್ತುವ ಕೆಲಸ ಬಿರುಸಿನಿಂದ ನಡೆಯುತ್ತಿದೆ.ಕಳೆದ ನಾಲ್ಕು ದಿನದಿಂದ ಈ ಕೆಲಸ ನಡೆಯುತ್ತಿದ್ದು, ಭಾರೀ ಪ್ರಮಾಣದ ಹೂಳು ಮೇಲೆತ್ತಲಾಗಿದೆ. ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನ ಉಡುಪಿಯ ಪುರಾತನ ದೇವಸ್ಥಾನವಾಗಿದ್ದು, ಕಳೆದ 30 ವರ್ಷದಲ್ಲಿ ಇದೇ ಮೊದಲ ಬಾರಿಗೆ ಕೆಸರೆತ್ತಲಾಗಿದೆ.ಸದ್ಯ ಅಭಿಷೇಕ ಪ್ರಿಯನಾಗಿರುವ ಈಶ್ವರ ದೇವರಿಗೆ ಈ ಮಳೆಗಾಲದಲ್ಲಿ ಶುದ್ಧ ನೀರು ಲಭ್ಯವಾಗಲಿದೆ.Sign in to your account
Username or Email Address


Password

 Remember Me


