ಬೆಂಗಳೂರು: ನಿಮಗೆ ತಾಕತ್ತು ಇದ್ದರೆ ರಾಜೀನಾಮೆ ಕೊಟ್ಟು ಬಿಜೆಪಿಯಿಂದ ಶಿವಾಜಿನಗರದಲ್ಲಿ ಚುನಾವಣೆ ಎದುರಿಸಿ ಎಂದು ಶಾಸಕ ರೋಷನ್ ಬೇಗ್ ಅವರಿಗೆ ರಿಜ್ವಾನ್ ಅರ್ಷದ್ ಸವಾಲು ಎಸೆದಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ರಿಜ್ವಾನ್ ಅರ್ಷದ್ ಅವರು, ರೋಷನ್ ಬೇಗ್ ಅವರು ಎಕ್ಸಿಟ್ ಪೋಲ್ ಬಗ್ಗೆ ಎಕ್ಸೈಟ್ ಆಗಿದ್ದಾರೆ. ಅವರು ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಕೆಲಸ ಮಾಡಿದ್ದಾರೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದಿದ್ದಾರೆ. ಇದನ್ನೂ ಓದಿ: ವೇಣುಗೋಪಾಲ್ ಬಫೂನ್, ಸಿದ್ದರಾಮಯ್ಯ ಅಹಂಕಾರಿ ಎಂದ ಬೇಗ್‍ಗೆ ಶೋಕಾಸ್ ನೋಟಿಸ್ಅವರು ಪಕ್ಷ ಮತ್ತು  ನಾಯಕರ ಬಗ್ಗೆ ಮಾತನಾಡುವ ಮೊದಲು ತಮ್ಮ ಹಿನ್ನೆಲೆ ಏನು ಎಂದು ತಿಳಿದುಕೊಳ್ಳಲಿ. ಈ ಹಿಂದೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದಾಗ ಏನೆಲ್ಲಾ ಮಾಡಿದ್ದಾರೆ ಅನ್ನೊದನ್ನು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಪರೋಕ್ಷವಾಗಿ ರೋಷನ್ ಬೇಗ್ ಕೆಲಸ ಮಾಡಿಲ್ಲ ಅಂತ ರಿಜ್ವಾನ್ ಟಾಂಗ್ ಕೊಟ್ಟಿದ್ದಾರೆ.ಮೊಸಳೆ ಕಣ್ಣಿರು ಹಾಕುವುದನ್ನು ನಿಲ್ಲಿಸಿ. ನಿಮಗೆ ತಾಕತ್ತು ಇದ್ದರೆ ರಾಜೀನಾಮೆ ಕೊಟ್ಟು ಶಿವಾಜಿನಗರದಲ್ಲಿ ಚುನಾವಣೆ ಎದುರಿಸಿ. ನಿಮಗೆ ಕಾಂಗ್ರೆಸ್ ಸರಿಯಿಲ್ಲ ಅಂತ ಹೇಳುವುದಾದರೆ ಬಿಜೆಪಿಯಿಂದ ಸ್ಪರ್ಧೆ ಮಾಡಿ ಎಂದು ರಿಜ್ವಾನ್ ಸವಾಲು ಎಸೆದಿದ್ದಾರೆ.Sign in to your account
Username or Email Address


Password

 Remember Me


