ಹಾಸನ: ನಾನು ರೋಗಿಗಳಿಂದ ಹಣ ಪಡೆಯುತ್ತೇನೆ ಏನಿವಾಗ ಎಂದು ಸಾರ್ವಜನಿಕರ ಮುಂದೇ ಸರ್ಕಾರಿ ವೈದ್ಯರೊಬ್ಬರೊಬ್ಬರು ಅವಾಜ್ ಹಾಕಿ ದರ್ಪ ತೋರಿದ್ದಾರೆ.ಸಕಲೇಶಪುರ ತಾಲೂಕು ಆಸ್ಪತ್ರೆಯ ಸರ್ಕಾರಿ ವೈದ್ಯ ರಾಧಾಕೃಷ್ಣ ಅಸ್ಪತ್ರೆಗೆ ಬರುತ್ತಿದ್ದ ರೋಗಿಗಳ ಹತ್ತಿರ ಅವರು ಕೊಟ್ಟಷ್ಟು ಹಣ ಪಡೆಯುತ್ತಿದ್ದೆ ಎಂದು ತಾಲೂಕು ಆರೋಗ್ಯಾಧಿಕಾರಿ ಎದುರೇ ಒಪ್ಪಿಕೊಂಡಿದ್ದಾರೆ.ಸಕಲೇಶಪುರದ ಸರ್ಕಾರಿ ಅಸ್ಪತ್ರೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರೋಗಿಗಳು ನೀಡುವಷ್ಟು ಹಣ ಪಡೆಯುತ್ತಿದ್ದೆ ಎಂದು ವೈದ್ಯ ರಾಧಾಕೃಷ್ಣ ಒಪ್ಪಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರೊಬ್ಬರು ಡಿಮ್ಯಾಂಡ್ ಮಾಡಿ ಹಣ ಪಡೆಯುತ್ತಿದ್ದಿರಾ ಎಂದು ಆರೋಪ ಮಾಡಿದ್ದಾರೆ. ಇದಕ್ಕೆ ಕೋಪಗೊಂಡ ಸರ್ಕಾರಿ ವೈದ್ಯ “ಹೌದು ಹಣ ಪಡೆಯುತ್ತೇನೆ ಏನಿವಾಗ” ಎಂದು ಅವಾಜ್ ಹಾಕಿದ್ದಾರೆ.ಇದಕ್ಕೆ ಆಕ್ರೋಶಗೊಂಡ ಸಾರ್ವಜನಿಕರು ಸ್ಥಳದಲ್ಲೇ ವೈದ್ಯನ ಬೆವರಿಳಿಸಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.Sign in to your account
Username or Email Address


Password

 Remember Me


